ಭಾರತದ ಇತಿಹಾಸದಲ್ಲಿ ಮೊದಲ ಡ್ರೋನ್ ಸರ್ವೆಗೆ ಚಾಲನೆ ನೀಡಿದ ಡಿಸಿಎಂ

ಬೆಂಗಳೂರು:ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಭೂಮಾಪನ ಕಾರ್ಯಾಚರಣೆಗಳಿಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಮೂಲಕ ಪ್ರಗತಿಪರ ಹಂತದತ್ತ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಕಂದಾಯ ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

promotions

ಅಧುನಿಕ ತಂತ್ರಜ್ಞಾನದಿಂದ ಭೂಮಾಪನದಲ್ಲಿ ಕ್ರಾಂತಿ:
ಡ್ರೋನ್ ತಂತ್ರಜ್ಞಾನದಿಂದ ಭೂಮಾಪನದ ನಿಖರತೆಯನ್ನು ಹೆಚ್ಚಿಸುವಲ್ಲಿ ಇದು ಮಹತ್ವದ ಹೆಜ್ಜೆ. ಕಂದಾಯ ಇಲಾಖೆ ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವುದು ರಾಜ್ಯದ ಹೆಮ್ಮೆಯ ವಿಷಯ, ಎಂದು ಡಿ.ಕೆ. ಶಿವಕುಮಾರ್ ಅವರು ಪ್ರಶಂಸಿಸಿದರು.

promotions

ಗ್ರಾಮೀಣ ಅಭಿವೃದ್ಧಿಗೆ ಸವಾಲುಗಳು ಮತ್ತು ಪರಿಹಾರಗಳು:ಈ ಯೋಜನೆಯ ಮೂಲಕ ಕಂದಾಯ ಖಾತೆಗಳಲ್ಲಿ ನಿಖರವಾದ ದಾಖಲೆಗಳನ್ನು ಸಂಗ್ರಹಿಸಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲು ಸರ್ಕಾರ ಬದ್ಧವಾಗಿದೆ. ಯೋಜನೆಯ ಪರಿಣಾಮವಾಗಿ, ಭೂಮಿಯ ಕುರಿತ ವ್ಯಾಜ್ಯಗಳು ಕಡಿಮೆಯಾಗಲಿವೆ ಹಾಗೂ ಜಮೀನು ಮಾಲೀಕತ್ವದಲ್ಲಿ ಪಾರದರ್ಶಕತೆ ಹೆಚ್ಚಲಿದೆ.

ಜಮೀನು ಮಾಲೀಕರಿಗೆ ಆಧುನಿಕ ಮಾಹಿತಿ ಒದಗಿಸಲು, ಈ ಯೋಜನೆ ಪ್ರತಿ ಹಂತದಲ್ಲೂ ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲಿದೆ. ಡ್ರೋನ್ ಸರ್ವೆಯಿಂದ ಅಭಿವೃದ್ಧಿಯ ಹೊಸ ಆಯಾಮವನ್ನು ಅರಸಿ ಬೆಳೆವ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

Read More Articles