
ಎಸ್ ಡಿಎಂಸಿ ಅಧ್ಯಕ್ಷರಿಂದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ ವಿತರಣೆ
- shivaraj B
- 30 Aug 2024 , 1:50 PM
- Athani
- 516
ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಎಸ್ ಡಿ ಎಂ ಸಿ ಅಧ್ಯಕ್ಷ ದೀಪಕ್ ಮುರಗುಂಡಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಬಾರಿ ಎಂಟನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆಯನ್ನು ಮಾಡಿದರು

ಶಿಕ್ಷಕ ಶಶಿಕಾಂತ್ ಪಡಸಲಗಿ ಮಾತನಾಡಿ, ವಿದ್ಯಾರ್ಥಿ ಜೀವನವು ತುಂಬಾ ಅತ್ಯಮೂಲ್ಯವಾದದ್ದು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ಶೈಲಿಯನ್ನು ನೋಡಿಕೊಳ್ಳಬೇಕು ಎಂದರು.

ದಿನನಿತ್ಯ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು ಗುರುಗಳು ಹೇಳಿದ ಪಾಠಗಳನ್ನು ಇನಮ್ರತೆಯಿಂದ ಆಲಿಸಬೇಕು ಮುಂದೆ ಬರುವ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ತೆಗೆದು ತಂದೆ ತಾಯಿಗಳಿಗೆ ಮತ್ತು ಶಾಲೆ ಉತ್ತಮ ಹೆಸರನ್ನು ತರಬೇಕು ಎಂದು ಹೇಳಿದರು
ಇದೆ ಇದೆ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಮಂಜುನಾಥ ಹತ್ತಿ. ಗ್ರಾಮದ ಕಾಂಗ್ರೆಸ್ ಮುಖಂಡ ಚಿದಾನಂದ ಮುಖಣಿ. ರೈತ ಸಂಘ ಅಧ್ಯಕ್ಷ ಮಾದೇವ ಮಡಿವಾಳ. ಅಜಿತ್ ಶಿಂದೆ.ಮಹಾದೇವ ಜಾಭಗೌಡರ. ಸಹ ಶಿಕ್ಷಕರು ಶಿಕ್ಷಕಿಯರು ಮತ್ತು ಶಾಲೆಯ ಮುದ್ದು ಮಕ್ಕಳು ಹಲ್ಯಾಳ ಗ್ರಾಮದ ಸಮಸ್ತ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ರಾಹುಲ್ ಮಾದರ