
ಪೊಲೀಸ್ ವೈರ್‌ಲೆಸ್ ವಿಂಗ್ ಹಾಸ್ಟೆಲ್ ಬ್ಲಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಬೆಂಗಳೂರು: ದಕ್ಷಿಣ ಭಾರತಕ್ಕೆ ಬೆಂಗಳೂರು ಪೊಲೀಸ್ ವೈರ್‌ಲೆಸ್ ವಿಂಗ್ ಪ್ರಾದೇಶಿಕ ಕೇಂದ್ರವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದರು.
ಬಾಣಸವಾಡಿಯ ರೀಜನಲ್ ಪೊಲೀಸ್ ವೈರ್‌ಲೆಸ್ ವಿಂಗ್ ಹಾಸ್ಟೆಲ್ ಬ್ಲಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಪ್ರಾದೇಶಿಕ ಪೊಲೀಸ್ ವೈರ್‌ಲೆಸ್ ತರಬೇತಿ ಸಂಸ್ಥೆ ಈ ಭಾಗದ ಪ್ರಮುಖ ಕೇಂದ್ರವಾಗಿದೆ. ಅಲ್ಲದೇ ತರಬೇತಿ ಮತ್ತು ಸಂವಹನ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದರು.

ಇನ್ನೂ ತಮಿಳುನಾಡು, ಆಂಧ್ರ, ತೆಲಂಗಾಣ, ಕರ್ನಾಟಕ, ಲಕ್ಷದ್ವೀಪಕ್ಕೆ ಇದೇ ಪ್ರಮುಖ ಕೇಂದ್ರವಾಗಿದೆ. ಇನ್ನು ಪೊಲೀಸ್ ವೈರ್‌ಲೆಸ್ ವಿಂಗ್‌ನಿಂದ ದೇಶದ ಭದ್ರತೆ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತಾ ಶಾ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸಚಿವ ಬಂಡಿ ಸಂಜಯ್ ಕುಮಾರ್ ತೆಲಂಗಾಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇನ್ನು ಬೆಂಗಳೂರಿಗೆ ಪೊಲೀಸ್ ವೈರ್‌ಲೆಸ್ ವಿಂಗ್ ಪ್ರಾದೇಶಿಕ ಕೇಂದ್ರ ಕೊಟ್ಟಿರುವುದು ಸಂತಸದ ವಿಷಯ ಎಂದರು. ಇನ್ನು ಜಾಗತಿಕ ಮಟ್ಟದ ಹಲವು ಕಂಪೆನಿಗಳು, ದೇಶದ ಐಟಿ, ಅಭಿವೃದ್ಧಿ ಸಂಬAಧಿತ ಕಂಪೆನಿಗಳು ಬೆಂಗಳೂರಿನಲ್ಲಿವೆ. ಬಹುತೇಕ ಪ್ರತಿಷ್ಠಿತ ಕಂಪೆನಿಗಳ ಆಯ್ಕೆ ಬೆಂಗಳೂರು ಆಗಿದೆ.

ಇದಕ್ಕೆ ಕಾರಣ ಇಲ್ಲಿನ ಮಾನವ ಸಂಪನ್ಮೂಲ ಹಾಗೂ ಅದರ ಬುದ್ಧಿಮತ್ತೆ. ದೇಶದ ಹಲವು ಪ್ರತಿಷ್ಠಿತ ಕಾಲೇಜುಗಳು ಇಲ್ಲಿ ಇದ್ದು, ಇಲ್ಲಿ ಎಂಜಿನಿಯರ್ ಮಾಡಿದ ವಿದ್ಯಾರ್ಥಿಗಳನ್ನೇ ನಾನಾ ಕಂಪನಿಗಳು ಆಯ್ಕೆ ಮಾಡುತ್ತಿದೆ. ಇದಕ್ಕೆ ಆರ್ಟಿಪಿಶಿಯಲ್ ಇಂಟಿಲಿಜೆನ್ಸಿ ಹಾಗೂ ಅಭಿವೃದ್ಧಿ ಪೂರಕ ತಾಂತ್ರಿಕತೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಕೆ.ವರ್ಮ, ಮುಖೇಶ್ ಸೇರಿದಂತೆ ಇತರರು ಇದ್ದರು.