ಆಸ್ಪತ್ರೆ ಆವರಣಕ್ಕೆ ನಾಯಿ ಪ್ರವೇಶಿಸಿದರೆ ಶಿಸ್ತು ಕ್ರಮ: ಆರೋಗ್ಯ ಆಯುಕ್ತಾಲಯ ಎಚ್ಚರಿಕೆ

ಬೆಂಗಳೂರು: ಆಸ್ಪತ್ರೆಗಳ ಆವರಣಕ್ಕೆ ಬೀದಿ ನಾಯಿಗಳು ಪ್ರವೇಶಿಸುವುದನ್ನು ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಸುತ್ತೋಲೆ ಹೊರಡಿಸಿದೆ. ಇದರಲ್ಲಿ, ಸರಕಾರಿ ಆರೋಗ್ಯ ಸಂಸ್ಥೆಗಳ ಮುಖ್ಯಸ್ಥರು ಈ ಸಂಬಂಧ ತಕ್ಕ ಕ್ರಮಗಳನ್ನು ಕೈಗೊಳ್ಳದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

promotions

ಸುತ್ತೋಲೆಯ ಪ್ರಕಾರ, ಅಸ್ಪತ್ರೆಗಳ ಆವರಣಕ್ಕೆ ನಾಯಿಗಳ ಪ್ರವೇಶದಿಂದ ಆವರ್ತಕ ಹಾಗೂ ಗರ್ಭಿಣಿಯರಿಗೆ, ತಾಯಿ-ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಈ ನಿರ್ಧಾರವು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ಸೋಂಕು ತಡೆಗಟ್ಟಲು ಮತ್ತು ಜನರಿಗೆ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಆಸ್ಪತ್ರೆಗಳ ಮುಖ್ಯಸ್ಥರು, ಸಂಬಂಧಿತ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೂಲಕ ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

promotions

ಬೀದಿ ನಾಯಿಗಳ ಸಮಸ್ಯೆ: ತ್ಯಾಜ್ಯ ನಿರ್ವಹಣೆಯ ಪ್ರಮುಖ ಪಾತ್ರ
ಆಸ್ಪತ್ರೆಗಳ ಆಹಾರ ತ್ಯಾಜ್ಯಗಳ ಸೂಕ್ತ ನಿರ್ವಹಣೆಯ ಕೊರತೆಯೇ ಬೀದಿ ನಾಯಿಗಳು ಆವರಣ ಪ್ರವೇಶಿಸಲು ಕಾರಣವಾಗುತ್ತಿದೆ. ಆಸ್ಪತ್ರೆಯ ಆವರಣವು ಅತ್ಯಂತ ಸೂಕ್ಷ್ಮ ಪ್ರದೇಶವಾದುದರಿಂದ, ಯಾವುದೇ ತರಹದ ಜಾನುವಾರುಗಳ ಪ್ರವೇಶ ನಿಷೇಧಿಸಲಾಗುವುದು. ಈ ನಿರ್ಲಕ್ಷ್ಯದ ಕಾರಣದಿಂದ ಆರೋಗ್ಯ ಸಂಸ್ಥೆಗಳ ಮೇಲಿನ ನಕಾರಾತ್ಮಕ ಅಭಿಪ್ರಾಯ ಹೆಚ್ಚುತ್ತಿದೆ ಎಂದು ಆಯುಕ್ತಾಲಯ ಹೇಳಿದೆ.

ಆರೋಗ್ಯ ಸಂಸ್ಥೆಗಳ ಮುಖ್ಯಸ್ಥರು ತಕ್ಷಣ ಕ್ರಮ ಕೈಗೊಂಡು, ಆವರಣದಲ್ಲಿರುವ ತ್ಯಾಜ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಹಾಗೂ ಯಾವುದೇ ಪ್ರಾಣಿಗಳು ಆಸ್ಪತ್ರೆ ಪ್ರವೇಶಿಸದಂತೆ ಸೂಕ್ಷ್ಮ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿ
ನಾಯಿ,ಹಾಗೂ ಇತರ ಸಾಕು ಪ್ರಾಣಿಗಳ hospital ಆವರಣ ಪ್ರವೇಶವನ್ನು ತಡೆಯುವ ಕ್ರಮವನ್ನು ಸೋಂಕು ಹರಡುವ ಅಪಾಯ ತಡೆಗಟ್ಟಲು ಅಗತ್ಯ ಎಂದು ಆಯುಕ್ತಾಲಯ ಸ್ಪಷ್ಟಪಡಿಸಿದೆ.ಆಸ್ಪತ್ರೆಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳುವುದು ಪ್ರಮುಖ ಆದ್ಯತೆಯಾಗಿರಬೇಕು ಎಂದು ಸೂಚಿಸಲಾಗಿದೆ.

Read More Articles