ಬೆಳಗಾವಿಯಲ್ಲಿ ಐತಿಹಾಸಿಕ ನಿರ್ಣಯ: ಸಂವಿಧಾನ ರಕ್ಷಣೆಗಾಗಿ ವರ್ಷವಿಡೀ ಪಾದಯಾತ್ರೆ ಘೋಷಣೆ

ಬೆಳಗಾವಿ:ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (CWC) ಇಂದು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಐತಿಹಾಸಿಕ ನಿರ್ಣಯಗಳನ್ನು ಘೋಷಿಸಿದೆ. ಸಭೆಯ ಬಳಿಕ, ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರಮುಖ ನಿರ್ಣಯಗಳನ್ನು ಬಹಿರಂಗಪಡಿಸಿದರು.

promotions

ನಿರ್ಣಯಗಳ ವಿವರ:
1.ಸಂವಿಧಾನ ರಕ್ಷಣೆ ಪಾದಯಾತ್ರೆ: 2025ರ ಜನವರಿ 26ರಿಂದ 2026ರ ಜನವರಿ 26ರವರೆಗೆ ‘ಸಂವಿಧಾನ ರಕ್ಷಣೆ ರಾಷ್ಟ್ರವ್ಯಾಪಿ ಪಾದಯಾತ್ರೆ’ ಹಮ್ಮಿಕೊಳ್ಳಲಾಗುತ್ತದೆ. ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
2.ರ‍್ಯಾಲಿ ಘೋಷಣೆ: ನಾಳೆ ಬೆಳಗಾವಿಯಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನಎಂಬ ಪ್ರಮುಖ ರ‍್ಯಾಲಿ ಆಯೋಜಿಸಲಾಗಿದೆ.
3.ರಾಜೀನಾಮೆ ಮತ್ತು ಕ್ಷಮೆಯ ಆಗ್ರಹ: ಗೃಹ ಸಚಿವರ ತಕ್ಷಣದ ರಾಜೀನಾಮೆ ಮತ್ತು ದೇಶದ ಜನತೆಗೆ ಕ್ಷಮೆ ಕೇಳುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ.

promotions

ಸಮಿತಿಯ ಅಭಿಪ್ರಾಯ:ಜೈರಾಮ್ ರಮೇಶ್ ಈ ಐತಿಹಾಸಿಕ ನಿರ್ಧಾರಗಳು ಕಾನೂನು ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ನಾಂದಿ ಹಾಡುತ್ತವೆ ಎಂದು ತಿಳಿಸಿದರು.

ಬೆಳಗಾವಿಯ ಈ ಸಭೆ ಕಾಂಗ್ರೆಸ್‌ ಪಕ್ಷದ ಭವಿಷ್ಯ ತಂತ್ರಗಳನ್ನು ರೂಪಿಸಲು ಮಹತ್ವಪೂರ್ಣದಾಗಿದೆ. ನಾಳೆ ನಡೆಯುವ ರ‍್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.

Read More Articles