ಬೆಳಗಾವಿ ಇಂಡಿಯನ್ ಕರಾಟೆ ಕ್ಲಬ್ ಜೆನರಲ ಚಾಂಪಿಯನ್‌ಶಿಪನಿಂದ ಗೌರವ
- 14 Jan 2024 , 3:37 AM
- Belagavi
- 207
ಬೆಳಗಾವಿ :ಇಂಡಿಯನ್ ಕರಾಟೆ ಕ್ಲಬ್ 28ನೇ ಆಗಸ್ಟ್ 2022 ರಂದು ಶಿವಮೊಗ್ಗ ಒಳಾಂಗಣ ಕ್ರೀಡಾಂಗಣದಲ್ಲಿ A.Z. ಮಾರ್ಷಲ್ ಆರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆ ಮೊದಲ ಜನರಲ್ ಚಾಂಪಿಯನ್‌ಶಿಪ್‌ನೊಂದಿಗೆ ಗೌರವಿಸಲ್ಪಟ್ಟಿದೆ.
ಇಂಡಿಯನ್ ಕರಾಟೆ ಕ್ಲಬ್‌ನ 212 ಕರಾಟೆ ಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕಟಾಜ್ ಮತ್ತು ಕುಮಿಟೆ ಸ್ಪರ್ಧೆಗಳಲ್ಲಿ 92 ಚಿನ್ನ, 98 ಬೆಳ್ಳಿ ಮತ್ತು 119 ಕಂಚು ಸೇರಿದಂತೆ ಒಟ್ಟು 309 ಪದಕಗಳನ್ನು ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ 1650 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸ್ಪರ್ಧೆಯ ಆಯೋಜಕರಾದ ಡಾ. ಎ. ಝಡ್ ಮುಹಿಬ್ ಮತ್ತು ಕರ್ನಾಟಕ ಕರಾಟೆ ಸಂಸ್ಥೆಯ ಕಾರ್ಯದರ್ಶಿ ಕ್ಯೋಶಿ ಎಂ.ಅಲ್ತಾಫ್ ಪಾಷಾ ಅವರು ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಸಂಸ್ಥೆಯ ಅಧ್ಯಕ್ಷ ಗಜೇಂದ್ರ ಕಾಕತೀಕರ ಅವರಿಗೆ ಟ್ರೋಫಿ ಮತ್ತು ಕೊರಿಯನ್ ಸಮುರಾಯ್ ನೀಡಿ ಗೌರವಿಸಿದರು.
ಕರಾಟೆ ಮಾಸ್ಟರ್ ಗಜೇಂದ್ರ ಕಾಕತೀಕರ,ಹೇಮಲತಾ ಜಿ ಕಾಕತೀಕರ ಮತ್ತು ತರಬೇತುದಾರರಾದ ವಿಠ್ಠಲ್ ಭೋಜಗಾರ್, ಪ್ರಭಾಕರ ಕಿಲ್ಲೇಕರ್, ಪರಶುರಾಮ್ ಕಾಕತೀ, ನಿಲೇಶ್ ಗುರ್ಖಾ, ವಿಜಯ್ ಸುತಾರ್, ಹರೀಶ್ ಸೋನಾರ್, ನತಾಶಾ ಅಷ್ಟೇಕರ್, ವಿನಾಯಕ್ ದಂಡಕರ್ ಮತ್ತು ಪರಶುರಾಮ್ ನೆಕನಾರ್ ಮಾರ್ಗದರ್ಶನ ಪಡೆಯುತ್ತಿದ್ದಾರೆ.