ಮಳೆಯ ಆರ್ಭಟಕ್ಕೆ ಕಿತ್ತೂರಿನಲ್ಲಿ ಮನೆ ಗೋಡೆ ಕುಸಿತ
- 15 Jan 2024 , 3:17 AM
- Belagavi
- 130
ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮಳೆಯ ಅವಾಂತರಕ್ಕೆ ಕಿತ್ತೂರು ತಾಲೂಕಿನಲ್ಲಿ ಮನೆಯ ಗೋಡೆ ಕುಸಿದ ಘಟನೆ ನಡೆದಿದೆ.
ಮನೆ ಗೋಡೆ ಕುಸಿದ ಪರಿಣಾಮ ಅವಶೇಷದಲ್ಲಿಬ ಸಿಲುಕಿದ ಮಹಿಳೆ ನರಳಾಟ ಕಂಡು ರಕ್ಷಣೆಗೆ ಬಂದ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ. ಕಾಳವ್ವ ಬಡಿಗೇರ 35 ಪ್ರಣಾಪಾಯದಿಂದ ಪಾರಾದ ಮಹಿಳೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬಾರದ ತಶೀಲ್ದಾರ ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾಳೆ.