ಅದ್ದೂರಿಯಾಗಿ ಜರುಗಿದ ಹುಲಗಬಾಳಿ ಬೀರೇಶ್ವರ ಜಾತ್ರೆ

ಹುಲಗಬಾಳಿ:ಅಥಣಿ ತಾಲೂಕಿನ ಸುಕ್ಷೇತ್ರ  ಹುಲಗಬಾಳಿ ಗ್ರಾಮದ ಬೀರೇಶ್ವರ ಜಾತ್ರೆಯು ಪ್ರತಿ ಸಲದಂತೆ ಈ ಸಲವೂ ಅತೀ ವಿಜೃಂಭಣೆಯಿಂದ ಜರುಗಿತು.

Your Image Ad

ಕೃಷ್ಣಾ ನದಿಯಿಂದ ಪವಿತ್ರ ಜಲ ತಂದು ಬೀರೇಶ್ವರ ಮಹಾ ಮೂರ್ತಿಗೆ  ವಿಶೇಷ ಪೂಜೆ ಹಾಗೂ ಮಹಾಅಭಿಷೇಕವನ್ನು ಅರ್ಪಿಸಲಾಯಿತು

Your Image Ad

ಸುತ್ತಲೀನ ವಿವಿಧ ಗ್ರಾಮಗಳಿಂದ ಆಗಮಿಸಿದ ವಾದ್ಯ ಮೇಳಗಳ ತಂಡಗಳು ಗ್ರಾಮದ ತುಂಬೆಲ್ಲ ಶ್ರೀ ಬೀರೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಗ್ರಾಮದಲ್ಲಿ ಪ್ರತಿ ಮನೆಗಳ ಮುಂದೆ ರಂಗೋಲಿ ಹಾಕಿ ಹೆಣ್ಣುಮಕ್ಕಳು ದೀಪಾವಳಿ ಹಬ್ಬ ವಿಶೇಷವಾಗಿ ಆಚರಿಸಿ ಸಂಭ್ರಮೀಸಿದರು.

Your Image Ad

ಜಾತ್ರಾ ಮಹೋತ್ಸವಕ್ಕೆ ಅಥಣಿ ತಾಲೂಕಿನ  ಮುರಗುಂಡಿ  ದೇವಸ್ಥಾನದ ಮುರಸಿದ್ದೇಶ್ವರ ಪಲ್ಲಕ್ಕಿ,  ಅಥಣಿಯ ದಡ್ಡಿ ಸಿದ್ದೇಶ್ವರ ಪಲ್ಲಕ್ಕಿ, ಹೊಸಟ್ಟಿ ಗ್ರಾಮದ ದೇವತೆಯಾದ ಲಕ್ಷ್ಮಿ ದೇವರ ಪಲ್ಲಕ್ಕಿ ಸಂಕೋನಟ್ಟಿ ಗ್ರಾಮದ ದಡ್ಡಿ ಸಿದ್ಧ ದೇವರ ಪಲ್ಲಕ್ಕಿ, ಹಣುಮಾಪೂರ ಗ್ರಾಮದ ಜಟ್ಟಿಂಗರಾಯ ದೇವರ ಪಲ್ಲಕ್ಕಿ ಹಾಗೂ ಹಲ್ಯಾಳ ಗ್ರಾಮದ ಶ್ರೀ ಶಿವರಾಯ ಮುತ್ಯಾ ಪಲ್ಲಕ್ಕಿಯು ಈ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದವು.

Your Image Ad

ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಸಾದವನ್ನು ಸವಿದು ಬೀರೇಶ್ವರರ ಆಶೀರ್ವಾದಕ್ಕೆ ಪಾತ್ರರಾದರು.

ರಾತ್ರಿ ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾವಿದರಿಂದ ಡೊಳ್ಳಿನ ಪದಗಳ ಹಾಡುಗಳ ಕಾರ್ಯಕ್ರಮಗಳು ಜರುಗುತ್ತವೆ ಎಂದು ಜಾತ್ರೆ ಕಮೀಟಿ ಸದಸ್ಯರು ಮಾಹಿತಿ ನೀಡಿದರು.

Read More Articles