ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕ ಜನಾರ್ಧನ ರೆಡ್ಡಿ
- Krishna Shinde
- 15 Jan 2024 , 1:58 AM
- Koppal
- 144
ಗಂಗಾವತಿ : ಗಂಗಾವತಿಯ ಈದ್ಗಾ ಮೈದಾನದಲ್ಲಿ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಕ್ತಿಯಿಂದ ಪಾಲ್ಗೊಂಡ ಗಂಗಾವತಿ ಶಾಸಕ್ ಗಾಲಿ ಜನಾರ್ಧನ್ ರೆಡ್ಡಿ ಪರಸ್ಪರ ಶುಭಾಶಯಗಳನ್ನು ತಿಳಿಸಿ ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ.
ತ್ಯಾಗ ಹಾಗೂ ಬಲಿದಾನದ ಸಂಕೇತವಾದ "ಬಕ್ರೀದ್" ಹಬ್ಬವನ್ನು ಜಗತ್ತಿನಾದ್ಯಂತ ನಮ್ಮ ಮುಸ್ಲಿಮ್ ಬಾಂಧವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ.
ಈ ಪವಿತ್ರ ದಿನದಂದು ನಾಡಿನ ಸಮಸ್ತ ಮುಸ್ಲಿಮ್ ಬಾಂಧವರಿಗೆ "ಬಕ್ರೀದ್" ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ ಎಂದು ರೆಡ್ಡಿ ಹೇಳಿದ್ದಾರೆ.