ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಶಾಸಕ ರೆಡ್ಡಿ
- Krishna Shinde
- 12 Jan 2024 , 4:48 PM
- Dakshina Kannada
- 292
ದಾನ ಧರ್ಮಕ್ಕೆ ಪ್ರಸಿದ್ಧವಾದ ಮತ್ತು ಭಕ್ತರಿಗೆ ನೈತಿಕ,ಸಾಂಸ್ಕೃತಿಕ,ಧಾರ್ಮಿಕ ಕೇಂದ್ರವಾದ ಯಕ್ಷಗಾನ ನಾಡಿನ ಸತ್ಯಸ್ಥಳ ಎಂದೇ ಖ್ಯಾತಿಗಳಿಸಿರುವ ಪ್ರಸಿದ್ಧ ಧರ್ಮಸ್ಥಳದ ಕ್ಷೇತ್ರನಾಥ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನಕ್ಕೆ ಕುಟುಂಬದೊಡನೆ ತೆರಳಿದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ನೇತ್ರಾವತಿ ನದಿಗೆ ತೆರಳಿ ತಾಯಿ ನೇತ್ರಾವತಿಯ ಜಲ ಸ್ಪರ್ಶ ಮಾಡಿ ಪಾವನನಾದೆನು ಎಂದು ರೆಡ್ಡಿ ತಿಳಿಸಿದ್ದಾರೆ.