ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ: ಸಚಿವ ಸುಧಾಕರ
- 15 Jan 2024 , 3:25 AM
- Bengaluru
- 130
ಬೆಳಗಾವಿ :ವಿದೇಶದಿಂದ ಬರುವ ಪ್ರಯಾಣಿಕರಿಗೆ ರಾಜ್ಯದಲ್ಲಿನ ಅಂತರ್ರಾಷ್ಟ್ರೀಯ್ ವಿಮಾನ ನಿಲ್ದಾಣದಲ್ಲಿ ರ‍್ಯಾಂಟಮ್ ಟೆಸ್ಟ್ ಮಾಡಲಾಗುವುದು. ಕೊರೋನಾ ರೋಗ ಲಕ್ಷಣಗಳು ಕಂಡು ಬಂದರೆ ಅವರನ್ನು ಕ್ವಾರಂಟೈನ್ ಮಾಡಲಾಗುವುದು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಹೇಳಿದರು.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಜಾರಿ ಮಾಡಿದೆ.
ಪಾಸಿಟಿವ್ ಇದ್ದರೆ ಸಿಟಿ ವ್ಯಾಲ್ಯೂ 25 ಕ್ಕಿಂತ ಕಡಿಮೆ ಇದ್ದರೆ ಜಿನೋಮಿಕ್ ಸೀಕ್ವೆನ್ಸ್ ಗೆ ಕಳಿಸುತ್ತೇವ. ಬೂಸ್ಟರ್ ಡೋಸ್ ಹೆಚ್ಚಿನ ಜನಕ್ಕೆ ಕೊಡಲು ಕ್ರಮ ವಹಿಸಲಾಗುವುದು. ಅಲ್ಲದೆ, ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮೂಲಕ ಡೋಸ್ ನೀಡಲಾಗುತ್ತದೆ. ಲಸಿಕಾ ಕೇಂದ್ರಗಳನ್ನ ತೆರೆಯುತ್ತೇವೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆಗೆ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಬೂಸ್ಟರ್ ಡೋಸ್ ನೀಡಲು ಹೆಚ್ಚಿನ ಪ್ರಮಾಣದಲ್ಲಿ ಕೊಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಒಂದು ಬಿಎಫ್ 7 ಕೇಸ್ ಅಧಿಕೃತವಾಗಿಲ್ಲ. ಚೀನಾದಿಂದ ಬಂದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಲಾಗಿಎದ. ಈನೋಮಿಕ್ ಸ್ವೀಕ್ವೇನ್ಸ್ ಗೆ ಕಳುಹಿಸಿ ಕೊಡಲಾಗುವುದು. ವರದಿ ಬಂದ ಮೇಲೆ ಗೊತ್ತಾಗುತ್ತದೆ ಎಂದರು.
ಕೊರೋನಾ ರೂಪಾಂತರ ತಳಿಯ ಹಾವಳಿ ವಿದೇಶದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವ ಕಾರ್ಯಕ್ರಮಕ್ಕೂ ನಿರ್ಬಂಧ ಇಲ್ಲ. ರಾಜಕೀಯ ಕಾರ್ಯಕ್ರಮ, ರ‍್ಯಾಲಿಗೆಗಳಿಗೆ ನಿರ್ಬಂಧ ಇಲ್ಲ. ಪಾದಯಾತ್ರೆ, ಬಸ್ ಯಾತ್ರೆ ಮಾಡಿಕೊಳ್ಳಲಿ ಎಂದರು.