
ಉತ್ತರ ಕರ್ನಾಟಕದ ದೊಡ್ಡ ಸಿಂಗಿಂಗ್ ಕಾಂಪಿಟೇಷನ್
- shivaraj bandigi
- 13 Feb 2024 , 6:22 PM
- Belagavi
- 608
ಬೈಲಹೊಂಗಲ : ಪಟ್ಟಣದ ದುರ್ಗಾದೇವಿ ದೇವಸ್ಥಾನದ ವೇ. ಮೂ.ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಅತ್ಯಂತ ದೊಡ್ಡ ಸಿಂಗಿಂಗ ಕಾಂಪಿಟೇಷನ್ ಇದರ ಆಡಿಷನ್ ನಡೆಯಲಿದ್ದು ಅಂತಿಮ ಗ್ರ್ಯಾಂಡ ಫಿನಾಲೆಗೆ ಕನ್ನಡದ ಖ್ಯಾತ ಹಿನ್ನಲೆ ಗಾಯಕ ರಾಜೇಶ ಕೃಷ್ಣನ ಮುಂದಾಳತ್ವ ವಹಿಸುವರು ಎಂದು ವೇ.ಮೂ. ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಮಠ ತಿಳಿಸಿದರು.

ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿ, ಪ್ರತಿವರ್ಷ ಕಲಾವಿದರು, ಸಾಧಕರಿಗೆ ಶಾಂಭವಿಶ್ರೀ ನೀಡುತ್ತ ಬಂದಿದ್ದು ಅದರ ಅಂಗವಾಗಿ ಉತ್ತರ ಕರ್ನಾಟಕದ ಅತೀ ದೊಡ್ಡ ಸಿಂಗಿಂಗ್ ಕಾಂಪಿಟೇಷನ ಆಯೋಜನೆ ಮಾಡಲಾಗಿದ್ದು, ಈ ಭಾಗದ ಅತೀ ದೊಡ್ಡ ಶೋ ಇದಾಗಲಿದೆ ಎಂದರು.

ಕಾಂಪಿಟೇಷನ್ ದ ಭಾಗವಾಗಿ ಆಡಿಷನ್ ಮುನವಳ್ಳಿ, ಬಾಗಲಕೋಟ, ಬೆಳಗಾವಿ, ಧಾರವಾಡ, ಗದಗ ಸೇರಿದಂತೆ ಬೈಲಹೊಂಗಲದಲ್ಲಿ ನಡೆಯಲಿದ್ದು ಯುವ ಜನತೆ ಹೆಚ್ಚಾಗಿ ಭಾಗವಹಿಸುವಂತೆ ತಿಳಿಸಿದರು .
ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನವಿದೆ ಎಂದು ಹೇಳಿದರು.
ವರದಿ : ರವಿಕಿರಣ್ ಯಾತಗೇರಿ