ಬೆಳಗಾವಿ ಜಿಲ್ಲೆಯ ಕಾಟಗಳಿ ಗ್ರಾಮದಲ್ಲಿ ಶ್ರೀ ರಾಮಲಾಲ ಪ್ರತಿಷ್ಟಾಪನೆ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ರವರಿಗೆ ಪೂಜೆ

ಬೆಳಗಾವಿ, ಜನವರಿ 22, 2024: ಅಯೋಧ್ಯೆಯ ಭವ್ಯವಾದ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಾಲ ಪ್ರತಿಷ್ಟಾಪನೆ ಅಂಗವಾಗಿ ಇಡೀ ದೇಶಾದ್ಯಂತ ರಾಮನ ಪೂಜೆ ನಡೆದಿದೆ. ಈ ಒಂದು ಸುವರ್ಣ ದಿನಕ್ಕಾಗಿ ಇಡೀ ದೇಶವೆ ಕಾಯುತ್ತಿತ್ತು. ಈ ಒಂದು ಅದ್ಭುತ ದಿನದಂದು ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕು ಕಾಟಗಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ರವರ ಮೂರ್ತಿಗೆ ಪೂಜೆ ಸಲ್ಲಿಸುವ ಮುಖಾಂತರ ಶ್ರೀರಾಮನನ್ನು ಪೂಜಿಸಲಾಯಿತು. 

promotions

ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡ ನಾಗಪ್ಪ ನಾಯ್ಕ, ದಿಗಂಬರ ನಾಯ್ಕ್, ಯುವ ಹೋರಾಟಗಾರ ಮಹೇಶ ಶಿಗೀಹಳ್ಳಿ, ಮಂಜು ತಳವಾರ್, ಜಾನೇಶ್, ಸಾಗರ್, ಹನುಮಂತ, ಆಕಾಶ ಸರೀಕರ ಮತ್ತು ಇನ್ನುಳಿದವರು ಉಪಸ್ಥಿತರಿದ್ದರು.

promotions

ಈ ಸಂದರ್ಭದಲ್ಲಿ ಮಾತನಾಡಿದ ಯುವ ಹೋರಾಟಗಾರ ಮಹೇಶ ಶಿಗೀಹಳ್ಳಿ, "ಶ್ರೀರಾಮನಿಗೆ ಹೇಗೆ ಭಕ್ತಿ ಯಿಂದ ಪೂಜಿಸುತ್ತೇವೋ ಮಹತ್ವ ನೀಡುತ್ತೇವೋ ಅದೆ ತರಹ ಹೆಚ್ಚು ಮಹತ್ವ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳಿಗೆ ಮಹತ್ವ ನೀಡಬೇಕು.

promotions

ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳು 24.000 ಶ್ಲೋಕಗಳಿಂದ 4 ಲಕ್ಷ 80.000 ಎಂಬತ್ತು ಸಾವಿರ ಏರಡು ಶಬ್ದಗಳಿಂದ ರಾಮಾಯಣ ರಚಿಸಿ ಶ್ರೀರಾಮನ ಜನನ ಮತ್ತು ಏಕತೆಯನ್ನು ಇಡೀ ಜಗತ್ತಿಗೆ ಪರಿಚಿಯಿಸಿದ್ದು ಶ್ರೀ ಮಹರ್ಷಿ ವಾಲ್ಮೀಕಿ. ಇವತ್ತು ಶ್ರೀ ರಾಮನ ಪೂಜೆ ಜೊತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳಿಗೆ ಪೂಜೆ ಸಲ್ಲಿಸುವುದು ಪ್ರತಿ ಒಬ್ಬ ಭಕ್ತಾದಿಗಳ ಧರ್ಮವಾಗಿದೆ" ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಕ್ತರು ಶ್ರೀ ಮಹರ್ಷಿ ವಾಲ್ಮೀಕಿ ರವರ ಮೂರ್ತಿಗೆ ಪೂಜೆ ಸಲ್ಲಿಸಿ, ಶ್ರೀರಾಮನ ಜನ್ಮದಿನವನ್ನು ಆಚರಿಸಿದರು.

Read More Articles