ಸಾವಿತ್ರಿಬಾಯಿ‌ ಫುಲೆ ಶಿಕ್ಷಕಿಯರ ಸಂಘ ಪ್ರಾರಂಭವಾಗಿದ್ದು ಹೆಮ್ಮೆಯ ವಿಷಯ-ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ

ಅಥಣಿ : ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ತ್ಯಾಗ ಅಪಾರ ಅವರ ಹೆಸರಿನಲ್ಲಿ ಶಾಲಾ ಶಿಕ್ಷಕಿಯರು ಸಮಾಜ ಸೇವೆ, ಶೈಕ್ಷಣಿಕ ಸೇವೆಯ ಉದ್ದೇಶದಿಂದ ಸಂಘ ಮಾಡಿಕೊಂಡಿದ್ದು ಅಭಿನಂದನಾರ್ಹ ಎಂದು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಹೇಳಿದರು.

promotions

ಅವರು ಅಥಣಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಲತಾ ಎಸ್ ಮುಳ್ಳೂರ ಅವರ ಮಾರ್ಗದರ್ಶನದಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ  ಧಾರವಾಡ ತಾಲೂಕು ಘಟಕ ಅಥಣಿ ವತಿಯಿಂದ ಶಿಕ್ಷಣಾಧಿಕಾರಿಗಳಿಗೆ ಸಹಕಾರ ನೀಡಿ ಎಂದು ಭೇಟಿಯಾಗಿ ಮನವಿ ಮಾಡಿದ ಹಿನ್ನಲೆಯಲ್ಲಿ ಮಾತನಾಡಿ ಈ ಸಂಘದ ಮೂಲಕ ತಮ್ಮ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ನಮ್ಮ ಪ್ರೋತ್ಸಾಹ ಇದೆ, ನಮ್ಮ ಅಥಣಿ ತಾಲೂಕಿನಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಚನೆಯಾಗಿದ್ದು ಹೆಮ್ಮೆಯ ವಿಷಯ, ಮಾತೆ ಸಾವಿತ್ರಿಬಾಯಿ ಅವರ ಜೊತೆ ಇತರ ಮಹಾನ್ ವ್ಯಕ್ತಿಗಳ ತತ್ವ ಆದರ್ಶ, ಜೀವನದ ಮೌಲ್ಯಗಳನ್ನು‌ ಪ್ರತಿಯೋರ್ವರಿಗೂ ಮುಟ್ಟಿಸುವ ಕೆಲಸ ಮಾಡಿ ಎಂದರು.

promotions

ಈ ವೇಳೆ ಸಂಘದ ತಾಲೂಕಾ ಅಧ್ಯಕ್ಷೆ ರೇಣುಕಾ ಬಡಕಂಬಿ, ಪ್ರಧಾನ ಕಾರ್ಯದರ್ಶಿ ರಂಜನಾ ಚೌಗಲಾ, ಕೋಶಾಧ್ಯಕ್ಷೆ ಝೆಡ್. ಎಚ್. ಕುಡಚಿ ಸೇರಿದಂತೆ ಸಂಘಟನಾ ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಕಾರ್ಯಕಾರಿಣಿ ಸದಸ್ಯರುಗಳು ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಶಿಕ್ಷಕಿಯರು ಹಾಜರಿದ್ದರು.

ವರದಿ ಅಜೀತ ಕಾಂಬಳೆ  ಲೋಕಲವಿವ ನ್ಯೂಸ್

Read More Articles