ಅದ್ದೂರಿಯಾಗಿ ಜರುಗಿದ ಶಿವರಾಯ ಮುತ್ಯಾನ ಜಾತ್ರಾ ಮಹೋತ್ಸವ

ಅಥಣಿ- ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಶಿವರಾಯ ಮುತ್ಯಾನ  ಜಾತ್ರೆಯು ಸಕಲ ಭಕ್ತರ ಜಯಘೋಷಗಳ ಮದ್ಯೆ   ವಿಜೃಂಭಣೆಯಿಂದ  ಜರುಗಿತು.

promotions

ಜಾತ್ರೆ ದಿನ  ದೇವಸ್ಥಾನದ ಪೂಜಾರಿ  ಸೋಮಪ್ಪ   ಮಗದುಮ್ ಅವರು ಮುಂಜಾನೆ ಕೃಷ್ಣ ನದಿಯಿಂದ ಮಡಿ  ಜಲವನ್ನು ತಂದು ಶಿವರಾಯ ಮುತ್ಯಾನ ಮೂರ್ತಿಗೆ  ವಿಶೇಷ ಪೂಜೆ ಮಹಾಭಿಷೇಕವನ್ನು ನೆರವೇರಿಸಿದರು. ನಂತರ ಶಿವರಾಯ ಮುತ್ಯಾನ  ಮೂರ್ತಿಯ ಪಾಲಿಕೆಯ ಉತ್ಸವವು ಗ್ರಾಮದ ತುಂಬಿಲ್ಲ  ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತಲ್ಲದೆ ನಟ್ಟ ನಡುವೆ  ಅಲಗ ಹಾಯುವ ಕಾರ್ಯಕ್ರಮವು  ಜರುಗಿತು. 

promotions

ವಿವಿಧ ವಾದ್ಯಮೇಳ,   ಡೊಳ್ಳು ಕುಣಿತದವರು  ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ  ಜಾತ್ರೆಗೆ ಇನ್ನಷ್ಟು ಮೆರಗು ನೀಡಿದರು.

promotions

ಸುತ್ತಮುತ್ತಲಿನ  ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು  ಶಿವರಾಮ ಮುತ್ಯ ಅವರ ಮಹಾಪ್ರಸಾದವನ್ನು ಸೇವಿಸಿ,  ಆಶೀರ್ವಾದ ಪಡೆದುಕೊಂಡರು.

ವರದಿ : ರಾಹುಲ್ ಮಾದರ 

Read More Articles