ಶ್ರೀ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಅದ್ದೂರಿ ತಯಾರಿ
- Krishna Shinde
- 15 Jan 2024 , 1:07 PM
- Belagavi
- 357
ಬೆಳಗಾವಿ : ಶ್ರೀ ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ ಸಮಿತಿಯು 4ನೇ ಏಪ್ರಿಲ್ 2023 ರಂದು ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಜೈನ ಸಮುದಾಯವು ಅನೇಕ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಶೋಭಾಯಾತ್ರೆ ಉದ್ಘಾಟನೆ : ಶ್ರೀ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವದ ಅಂಗವಾಗಿ ಮಂಗಳವಾರ ದಿನಾಂಕ : 01-04-2023 ಬೆಳಿಗ್ಗೆ 8.00 ಗಂಟೆಗೆ ಮಂಗಲ ಶೋಭಾಯಾತ್ರೆ ಆಯೋಜಿಸಲಾಗಿದೆ.
ಶೋಭಾಯಾತ್ರೆಯನ್ನು ಗಣ್ಯ ಮಾನ್ಯ ಹಾಗೂ ಮಹಾನುಭಾವಿಗಳ ಸಮ್ಮುಖದಲ್ಲಿ ಸಮಾದೇವಿಗಲ್ಲಿಯ ಮಾರುತಿ ಮಂದಿರದ ಎದುರುಗಡೆ ಉದ್ಘಾಟಿಸಲಾಗುವುದು. ಈ ಶೋಭಾ ಯಾತ್ರೆಯು ರಾಮದೇವ ಗಲ್ಲಿ, ಕಿರ್ಲೋಸ್ಕರ ರೋಡ್, ನ್ಯೂಕ್ಲಿಯಸ್ ಮಾಲ್, ರಾಮಲಿಂಗಖಂಡ ಗಲ್ಲಿ, ಟಿಳಕಚೌಕ, ಸೇರಿ ಗಲ್ಲಿ, ಶನಿ ಮಂದಿರ, ಎಸ್.ಪಿ.ಎಮ್.ರೋಡ್, ಕೋರೆ ಗಲ್ಲಿ, ಶಹಾಪೂರ ಹಾಗೂ ಗೋವಾವೇಸ್ ಮುಖಾಂತರವಾಗಿ ಮಹಾವೀರ ಭವನ ತಲುಪುವುದು, ಮಹಾವೀರ ಭವನದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿಕೊಂಡು ಹೋಗಬೇಕು ಎಂದು ಆಯೋಜಕರು ವಿನಂತಿಸಿದ್ದಾರೆ.
ಎಲ್ಲ ಜೈನ ಮಂದಿರದವರು ಈ ಶೋಭಾಯಾತ್ರೆಯಲ್ಲಿ ತಮ್ಮ ಅಲಂಕರಿಸಿದ ಶೋಭಾರಥಗಳ (ಸ್ತಬ್ಧ ಚಿತ್ರಸಹಿತ)ಆಗಮಿಸಬೇಕು ಎಂದು ಹೇಳಿದ್ದಾರೆ.ಎಲ್ಲ ಶ್ರಾವಕರು ಬಿಳಿಬಣ್ಣದ ವಸ್ತ್ರಗಳನ್ನು ಧರಿಸಬೇಕು ಹಾಗೂ ಶ್ರಾವಕಿಯರು ಕೇಸರಿ ಬಣ್ಣದ ಸೀರೆ ಅಥವಾ ವಸ್ತ್ರ ಧರಿಸಬೇಕು. ಎಲ್ಲ ಜೈನ ಮಂದಿರದವರು ಹಾಗೂ ಆ ಭಾಗದ ಜನರು ತಮ್ಮ ಸಂಸ್ಥೆಯ ಬ್ಯಾನರ್ ಜೊತೆಗೆ ಉಪಸ್ಥಿತರಿರಬೇಕೆಂದು ಶ್ರಾವಕ ಶ್ರಾವಕಿಯರಲ್ಲಿ ವಿನಂತಿಸಿದ್ದಾರೆ.
ಮೆರವಣಿಗೆಯಲ್ಲಿ ಡಿ.ಜೆ. ( ಡಾಲ್ಬಿ ) ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜೈನ ಭಾಂದವರು ತಮ್ಮ ತಮ್ಮ ಉದ್ಯೋಗವನ್ನು ಮಂಳವಾರ ದಿನಾಂಕ 04-04-2023
ರಂದು ಕಡ್ಡಾಯವಾಗಿ ಬಂದ್ ಇಡಬೇಕಾಗಿ ವಿನಂತಿಸಿದ್ದಾರೆ.