ವಿಜೃಂಭಣೆಯಿಂದ ಜರುಗಿದ ಶ್ರಿ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ
- Shivaraj Bandigi
- 15 Jan 2024 , 2:39 AM
- Belagavi
- 220
ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದ ಗ್ರಾಮದೇವತೆಯಾದ ಶ್ರೀ ಶಿವರಾಮ ಮುತ್ಯಾ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು
ಶಿವರಾಮ ಮುತ್ಯಾ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರವಚನ ಕಾರ್ಯಕ್ರಮವು ಜರಿಗಿದವು
ಇಂದು ಮುಂಜಾನೆ ದೇವರ ಶಿವರಾಯ ಮುತ್ಯಾ ಗದ್ದುಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ಜರುಗಿತು
ನಂತರದಲ್ಲಿ ಗ್ರಾಮದ ಬೀದಿಗಳಲ್ಲಿ ಶ್ರೀ ಶಿವರಾಮ್ ಮುತ್ಯ ಪಲ್ಲಕ್ಕಿ ಮೆರವಣಿಗೆಯು ಅತಿ ವಿಜ್ರಬನೆಯಿಂದ ಜರಗಿತು ನೂರಾರು ಭಕ್ತರು ಭಂಡಾರದಲ್ಲಿ ಮಿಂದೆದು ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು
ಗ್ರಾಮದ ಹೃದಯ ಭಾಗದಲ್ಲಿ ದೇವರ ಪಲ್ಲಕ್ಕಿಯನ್ನು ಇರಿಸಿ ಅಲಗ ಹಾಯುವ ಕಾರ್ಯಕ್ರಮ ಜರಗಿತು ಇದೇ ಸಂದರ್ಭದಲ್ಲಿ ಗ್ರಾಮಗಳಿಂದ ಆಗಮಿಸಿದ ಭಕ್ತರು ಶಿವರಾಯ ಮುತ್ಯಾ ದರ್ಶನ ಪಡೆದರು
ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಿದಾನಂದ ಮುಕಣಿ. ಸಿದ್ದಪ್ಪಾ ಲೋಕುರ್.ಮುತ್ತಪ್ಪ ಸನದಿ. ಶಿವರಾಯ ಮಗದುಮ್ಮ. ಗುಂಡು ಹಿರೇಕುರುಬರ್. ಹಣಮಂತ ಲೋಕುರ. ತಿಪ್ಪಣ್ಣ ಹಿರೇಕುರಬರ. ಸುರೇಶ ಬಾಗಿ.
ವಿನೋದ ನಾಯಿಕ. ಶ್ರೀಶೈಲ ನಾಯಿಕ ಗ್ರಾಮದ ನೂರಾರು ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು