ವಿಶ್ವ ವಿಕಲಚೇತನ ದಿನದ ಅಂಗವಾಗಿ ವಿಶೇಷ ಕ್ರೀಡಾಕೂಟಗಳು

ವಿಶ್ವ ವಿಕಲಚೇತನ ದಿನದ ಅಂಗವಾಗಿ ವಿಶೇಷ  ಕ್ರೀಡಾಕೂಟಗಳು 
ಹಲವು ಕ್ರೀಡೆಗಳೊಂದಿಗೆ ವಿಶೇಷ ಚೇತನ ಮಕ್ಕಳಿಗೆ ಉತ್ಸಾಹ ತುಂಬಿದ ಜಿಲ್ಲಾಡಳಿತ 
ವಿಲ್ ಚೇರ್ ಬಾಸ್ಕೆಟ್ ಬಾಲನಲ್ಲಿ ಜಿಲ್ಲೆಯ 3 ತಂಡಗಳು ಭಾಗಿ 
ವಯಸ್ಸಿನ ಅನುಗುಣವಾಗಿ ವಿಶೇಷ ಚೇತನ ಮಕ್ಕಳಲ್ಲಿ ವಿಂಗಡಣೆ ಮಾಡಿ ಕ್ರೀಡೆ 
ಡಿಸೆಂಬರ್ 3,2022 ರಂದು ವಿಶ್ವ ವಿಕಲಚೇತನ ದಿನಾಚರಣೆ ಕುಮಾರ್ ಗಂಧರ್ವ ಹಾಲ ನಲ್ಲಿ ಆಚರಣೆ
ಕಾರ್ಯಕ್ರಮ ಉದ್ಘಾಟಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವರು.
 
ಜಿಲ್ಲಾ ಮಟ್ಟದ ವಿಕಲಚೇತನರ ಕ್ರಿಡಾಕೂಟ : ಅಂಗ ವೈಕಲ್ಯ ದೇಹಕ್ಕೆ, ನಮ್ಮ ಆತ್ಮಸ್ಥೈರ್ಯಕಲ್ಲ.

ದೈಹಿಕವಾಗಿ ಸದೃಡವಾಗಿರುವ ವ್ಯಕ್ತಿಯು ಕಷ್ಟ ಪಟ್ಟು ದುಡಿದು ಬದುಕಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದುವುದನ್ನು ನಾವು ಪ್ರಸ್ತುತ ಸಮಾಜದಲ್ಲಿ ಕಾಣಬಹುದು.

promotions
ದೈಹಿಕವಾಗಿ ಅಂಗ ವೈಕಲ್ಯ ಹೊಂದಿದರು ಜೀವನದಲ್ಲಿ ಏನಾದರು ಸಾಧನೆ ಮಾಡೇ ಮಾಡುತ್ತೇನೆ ಎನ್ನುತ್ತ ಕ್ರಿಡಾಕೂಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ವಿಕಲಚೇತನರು ಎಲ್ಲರಿಗೂ ಸ್ಪೂರ್ತಿ ಎಂದೇ ಹೇಳಬಹುದು.

ಡಿಸೆಂಬರ್ 3 ರಂದು ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ವಿಕಲಚೇತನರ ಕ್ರಿಡಾಕೂಟವನ್ನು ಇಂದು ಜಿಲ್ಲಾ ಕ್ರಿಡಾಂಗಣದಲ್ಲಿ ಆಯೋಜಿಸಲಾಯಿತು.

promotions
ವಿಕಲಚೇತನದ  ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜೊತೆಗೆ 45 ವರ್ಷದವರೆಗಿನ ವಿಕಲಚೇತನರು ಕ್ರಿಡಾಕೂಟದಲ್ಲಿ ಭಾಗವಹಿಸಿದ್ದರು.  

ಬಾಸ್ಕೆಟ್ ಬಾಲ್, ವಾಲಿಬಾಲ್, ಕಬ್ಬಡ್ಡಿ, ರನ್ನಿಂಗ್ ಸೇರಿದಂತೆ ಹತ್ತು ಹಲವಾರು ಕ್ರಿಡೆಗಳನ್ನು ಆಯೋಜಿಸಲಾಗಿತ್ತು.

promotions

Read More Articles