ಕೇದನೂರ್ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಸುಮನ್ ಬುಕ್ಯಾಳ್ ಅವಿರೋಧವಾಗಿ ಆಯ್ಕೆ
- 15 Jan 2024 , 2:33 AM
- Belagavi
- 127
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆ ಮೆರೆಗೆ ಯಮಕನಮರಡಿ ಮತಕ್ಷೇತ್ರದ ಕೇದನೂರ್ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸುಮನ್ ಸಿದ್ದರಾಯ ಬುಕ್ಯಾಳ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಹಗಲಿರುಳು ಗ್ರಾಪಂ ಸದಸ್ಯರು ಹಾಗೂ ಅಧ್ಯಕ್ಷರು ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಫಲಾನುಭವಿಗಳಿಗೆ ಸಕಾಲ ವೇಳೆಯಲ್ಲಿ ತಲುಪಿಸುವ ಕಾರ್ಯಯಾಗಬೇಕಿದೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸರ್ಕಾರದ ಅನುದಾನ ಬಳಸಿ ಅಭಿವೃದ್ದಿ ಕೆಲಸ ಮಾಡಿ ಮಾದರಿ ಗ್ರಾಪಂ ಎನಿಸಿಕೊಳ್ಳಬೇಕು ಎಂದು ಚುನಾವಣೆಯಲ್ಲಿ ಆಯ್ಕೆಯಾದ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಶುಭಹಾರೈಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಕಾಶವ್ವಾ ಕಲ್ಲಪ್ಪಾ ಹೊಸಮನಿ, ಮಾಜಿ ಉಪಾಧ್ಯಕ್ಷ ಸವಿತಾ ಸಂಭಾಜಿ, ಮಂಜುಳಾ ಸಂತೋಷ ಪಾಟೀಲ, ಸ್ವಾತಿ ಹಡಲಗಿ, ಪರಶುರಾಮ ಗುಡಗೇನಟ್ಟಿ, ಜ್ಯೋತಿ ರಾಜಾಯಿ, ಲಕ್ಷ್ಮಿ ಬೆಳಗಾವಿ, ಗಾವಡು ಬೀರ್ಜೆ, ಮಧು ಸಂಬಾಜಿ, ಹಾಲಪ್ಪಾ ಬುರಲಿ, ಬಾಳು ಗುಡಾಜಿ, ಮಲ್ಲಪ್ಪಾ ದಡ್ಡಿಕೇರ, ಮಾರುತಿ ಮಾಸ್ತೋಳಿ ಹಾಗೂ ಇತರರು ಇದ್ದರು.