
ರಾಜ್ಯೋತ್ಸವದಲ್ಲಿ ಗಮನ ಸೆಳೆದ ಇಮ್ಮಡಿ ಪುಲಕೇಶಿ ಮಹಾರಾಜರ ಪ್ರತಿಮೆ
- Krishna Shinde
- 15 Jan 2024 , 8:31 AM
- Belagavi
- 571
ಬೆಳಗಾವಿ :ಕರ್ನಾಟಕದ 50ನೇ ರಾಜ್ಯೋತ್ಸವ ಅದ್ದೂರಿಯಾಗಿ ನಡೆದಿದ್ದು ಇಡೀ ದೇಶ ಕರ್ನಾಟಕದತ್ತ ತಿರುಗಿನೋಡುವಂತೆ ಹೆಮ್ಮೆಯ ಕನ್ನಡಿಗರು ಆಚರಿಸಿದ್ದಾರೆ.

ರಾಜ್ಯೋತ್ಸವ ಅಂದರೆ ಬೆಳಗಾವಿ, ಎಂದೂ ಕಂಡಿರದ ಮಾಡಿರದ ಸಂಭ್ರಮ ಉತ್ಸಾಹ ಮತ್ತು ನಾಡಾಭಿಮಾನ ಕಿತ್ತೂರ ರಾಣಿ ಚೆನ್ನಮ್ಮನ ನಾಡಿನಲ್ಲಿ ಅದ್ದೂರಿಯಾಗಿ ಜರುಗಿದೆ.

ನವೆಂಬರ್ 1ನೇ ರಾತ್ರಿ 12 ಗಂಟೆಗೆ ಶುರುವಾದ ರಾಜ್ಯೋತ್ಸವದ ಸಂಭ್ರಮಾಚರಣೆ ಇಡೀ ದಿನ ಬಿಡುವಿಲ್ಲದೇ ಜರುಗಿದ್ದು ಕನ್ನಡದ ಕಲರವವನ್ನು ಎತ್ತಿ ಹಿಡಿದಿದೆ.
ಭೀಮಾ ಶಂಕರ ಪಾಟೀಲ್ ನೇತೃತ್ವದ ಕರ್ನಾಟಕ ನವನಿರ್ಮಾಣ ಸೇನೆ "ದಕ್ಷಿಣ ಪಥೇಶ್ವರ ನೌಕಾ ಪಡೆಯ ಪಿತಾಮಹ" ಎಂದೆ ಹೆಗ್ಗಳಿಕೆ ಪಡೆದಿರುವ "ಇಮ್ಮಡಿ ಪುಲಕೇಶಿ ಮಹಾರಾಜರ" ಬೃಹತ ಪ್ರತಿಮೆಯನ್ನು ಪ್ರದರ್ಶನ ಮಾಡಿ ಕರುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಎತ್ತಿ ಹಿಡಿದ್ದಿದ್ದಾರೆ.
ಇದೆ ರೀತಿ ಪ್ರತಿಯೊಬ್ಬ ಕನ್ನಡಿಗ ತನ್ನ ದೇಶಾಭಿಮಾನ ಮತ್ತು ನಾಡಭಿಮಾನವನ್ನು ಎತ್ತಿ ಹಿಡಿದು ನಾಡು ನುಡಿ ಮತ್ತು ಜಲಕ್ಕಾಗಿ ಒಗ್ಗಟ್ಟಾಗಿ ನಿಲ್ಲಬೇಕು ಮತ್ತು ಕರುನಾಡಿನ ಪ್ರತಿಷ್ಠೆಯನ್ನು ವಿಶ್ವದ್ಯಾಂತ ಹಬ್ಬಿಸಬೇಕು.
"ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ"