ದರ್ಗಾದಲ್ಲಿ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆಗೆ ಸಾಕ್ಷಿಯಾದ ಉಗಾರ ಬದ್ರುಕ್ ಗ್ರಾಮ

ಚಿಕ್ಕೋಡಿ : ಗಣೇಶ ಚತುರ್ಥಿ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಸಂಕೇತದ ಹಬ್ಬವಾಗಿದ್ದು, ಹಿಂದೂ-ಮುಸ್ಲಿಂರು ಸೇರಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಮೈಉಸ್‌ಬಾಣಿಯ ದರ್ಗಾದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಗ್ರಾಮಸ್ಥರು ಭಾವೈಕ್ಯತೆ ಮೆರೆದಿದ್ದರೆ. 

promotions

ಕಳೆದ ಆರು ವರ್ಷಗಳಿಂದ ಹಿಂದೂ ಮುಸ್ಲಿಂ ಯುವಕರು ಸೇರಿ ಗಣೇಶನನ್ನು ಕೂರಿಸುತ್ತಿದ್ದೇವೆ.

promotions

ಹಿಂದೂಗಳು ಮುಸ್ಲಿಂರ ಹಬ್ಬಗಳಾದ ಉರುಸ್, ಇದ್ ಮಿಲಾದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಣೆ ಮಾಡುತ್ತಾರೆ ಆದ್ದರಿಂದ ನಾವೆಲ್ಲರೂ ಏಕತೆಯ ಭಾವದಿಂದ ಯಾವುದೇ ಬೇಧ-ಭಾವ ಮಾಡದೇ, ನಾವೆಲ್ಲರೂ ಅಣ್ಣತಮ್ಮಂದಿರಂತೆ ಕೋಮು ಸೌಹಾರ್ದತೆಯಿಂದ ಹಿಂದೂ- ಇಸ್ಲಾಂ ಧರ್ಮದ ಹಬ್ಬವನ್ನು ಆಚರಣೆ ಮಾಡುತ್ತೇವೆಂದು ಕಮಿಟಿ ತಿಳಿಸಿದೆ.

Read More Articles