ಎಮ.ಕೆ.ಹುಬ್ಬಳ್ಳಿಗೆ ಗ್ರಹಮಂತ್ರಿ ವಿಸಿಟ್ ಭರ್ಜರಿ ತಯ್ಯಾರಿ ಮಾಡಿಕೊಂಡ ರಾಜ್ಯ ಬಿಜೆಪಿ .

krpp

ಬೈಲಹೊಂಗಲ: ರಾಷ್ಟ್ರದ ಸುರಕ್ಷತೆಗಾಗಿ, ತಮ್ಮ ಜೀವನವನ್ನು ಲೆಕ್ಕಿಸದೆ ನಿಸ್ವಾರ್ಥದಿಂದ ಬಿಜೆಪಿಯಲ್ಲಿ ಕಾರ್ಯಕರ್ತರು ಮಾಡುತ್ತಿರುವ ಅವಿರತ ಶ್ರಮದಿಂದ ಇಂದು ಬಿಜೆಪಿ ಪ್ರಪಂಚದಲ್ಲಿ ಅತಿ ದೊಡ್ಡದಾದ ಪಕ್ಷವಾಗಿ ಹೊರಹೊಮ್ಮಿದೆ ಅವರನ್ನು ಬೆಟ್ಟಿಯಾಗಲು ಜ28 ರಂದು ಎಮ.ಕೆ.ಹುಬ್ಬಳ್ಳಿಗೆ ಆಗಮಿಸುತ್ತಿರುವ ಅಮಿತ ಷಾ ಕಾರ್ಯಕ್ರಮಕ್ಕೆ ಮತಕ್ಷೇತ್ರದಿಂದ ಸ್ವಯಂ ಸ್ಪೂರ್ತಿಯಾಗಿ 25ಸಾವಿರ ಕಾರ್ಯಕರ್ತರು ಆಗಮಿಸಬೇಕು, ಈ ಸಭೆಗೆ ಲಕ್ಷ ಜನ ಅಗಮಿಸುವ ನಿರೀಕ್ಷೆ ಇದೆಯೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
  
ಪಟ್ಟಣದ ಗಣಾಚಾರಿ ಸಭಾಭವನದಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕರಪತ್ರ ಹಂಚುವದು, ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆಯಬೇಕು, ಪಲಾನುಭವಿಗಳ ಬೆಟ್ಟಿಮಾಡುವದು ಗೊಡೆಬರಹ ಮಾಡುವದರೊಂದಿಗೆ ಅಮಿತ ಷಾ ಕಾರ್ಯಕ್ರಮ ಬರದಿಂದ ಸಿದ್ದತೆ ನಡೆದಿದ್ದು ಬರುವ ಎಲ್ಲ ಕಾರ್ಯಕರ್ತರು 2ಘಂಟೆಯೊಳಗೆ ಸಭೆಯ ಸ್ಥಳ ತಲುಪಬೇಕು, ಅಲ್ಲಿ  ಊಟ, ಕುಡಿಯುವ ನೀರು, ಆಸನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕ್ಷೇತ್ರದ ಸಕ್ರೀಯ ಕಾರ್ಯಕರ್ತರು ಮುತವರ್ಜಿವಹಿಸಬೇಕು. 

ರಾಜ್ಯದಲ್ಲಿ 1ಕೋಟಿ ನೂತನ ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದ್ದು ಬರುವ ವಿಧಾನಸಭೆಯ ಚುನಾವಣೆಯ ತಯಾರಿಗೆ ನಾವೆಲ್ಲ ಸನ್ನದ್ದರಾಗಬೇಕು. ಅಮಿತ ಷಾ ಅವರ ಕಾರ್ಯಕ್ರಮಕ್ಕೆ ಎಲ್ಲ ಕಾರ್ಯಕರ್ತರನ್ನು ಕರೆ ತರಲು ಕರೆ ನೀಡಿದರು.

 ಜಿಲ್ಲಾ ಆಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಬೈಲಹೊಂಗಲ ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ತಂತ್ರ ದೆಹಲಿಯ ನಾಯಕರು ಯೋಚಿಸುವಾಗ ನಾವು ಕಾರ್ಯಕರ್ತರು ವಿಶ್ರಮಿಸದೆ ಶ್ರಮವಹಿಸಬೇಕು. ಇಲ್ಲಿ ಶಾಸಕರಾಗುವದು ದೊಡ್ಡದಲ್ಲ ದೇಶದ ಸುಭದ್ರತೆಗಾಗಿ ಬಿಜೆಪಿಯಲ್ಲಿ ಸೇವೆ ಮಾಡುವದರೊಂದಿಗೆ ಬಿಜೆಪಿ ಶಾಸಕರನ್ನ ಅಯ್ಕೆ ಮಾಡುವದು ಕಾರ್ಯಕರ್ತರ ಆಧ್ಯತೆಯಾಗಬೇಕು ವಿನಃ ವ್ಯಕ್ತಿಗತ ವಿಚಾರ ಬೀಡಿ ಕ್ಷೇತ್ರದಲ್ಲಿ ಜಗದೀಶ್ ಮೆಟಗುಡ್ ಅಥವಾ ವಿ.ಆಯ್ ಪಾಟೀಲ ಅವರಿಗೆ ಇವರನ್ನ ಇಬ್ಬರನ್ನು ಬಿಟ್ಟು ಬೇರಯವರಿಗೆ ಟಿಕೆಟ್ ನೀಡಿದರು.

ಬಿಜೆಪಿ ಗೆಲ್ಲಿಸಲು ಪಣ ತೊಡಬೇಕು ಇದು ಬಿಜೆಪಿಯ ಪಕ್ಷದ ಕಾರ್ಯಕರ್ತರ ನಿಲುವಾಗಬೇಕು ವ್ಯಕ್ತಿಗಿಂತ ಪಕ್ಷ ದೊಡ್ಡದು ಎನ್ನುವುದನ್ನು ಅರಿತು ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಪತಾಕಿ ಹಾರೊವದು ಖಂಡಿತ. ಚನ್ನಮ್ಮ ರಾಯಣ್ಣನ ನಾಡಿನ ಕಾರ್ಯಕರ್ತರ ಸ್ವಾಭಿಮಾನಿಗಳು ಬಿಜೆಪಿ ಚಾಣಕ್ಯ ಅಮಿತ ಷಾ ಕಾರ್ಯಕ್ರಮಕ್ಕೆ ಸುಮಾರು 25 ಸಾವಿರ ಕಾರ್ಯಕರ್ತರು ಅಗಮಿಸಬೇಕು ಎಂದರು.

ಮಾಜಿ ಮುಖ್ಯ ಸಚೆತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಡಾ.ವಿ.ಅಯ್.ಪಾಟೀಲ, ಜಗದೀಶ್ ಮೆಟಗುಡ್, ಎಫ್.ಎಸ್.ಸಿದ್ದನಗೌಡರ  ಮಾತನಾಡಿದರು.
ವೇದಿಕೆಯ ಮೇಲೆ ಜಯಪ್ರಕಾಶ್ ಎಮ್.ಸಿ., ಸುಭಾಷ್ ಪಾಟೀಲ, ಸಂದೀಪ ದೇಶಪಾಂಡೆ, ರತ್ನಾ ಗೋಧಿ, ಗುರು ಮೆಟಗುಡ್, ಮಡಿವಾಳಪ್ಪ ಚಳಕೊಪ್ಪ, ಬಸವರಾಜ ನೇಸರಗಿ, ನಿಂಗಪ್ಪ ಚೌಡನ್ನವರ, ಮಹೇಶ ಮನ್ನೂರ ಇದ್ದರು.
ಕಾರ್ಯಕ್ರಮದಲ್ಲಿ ಮಹೇಶ ಹರಕುಣಿ, ಜಗದೀಶ್ ಬೂದಿಹಾಳ, ಲಕ್ಕಪ್ಪ ಕಾರ್ಗಿ, ಮಲ್ಲಿಕಾರ್ಜುನ ದೇಸಾಯಿ, ಸಚಿನ ಪಟಾತ, ರಾಚಪ್ಪ ಮಟ್ಟಿ, ಮೋಹನ ವಕ್ಕುಂದ, ಮಡಿವಾಳಪ್ಪ ಹೋಟಿ, ಗೌಡಪ್ಪ ಹೊಸಮನಿ, ಉಮೇಶ ಲಾಳ, ಸುರೇಶ ಮ್ಯಾಕಲ್, ರಮೇಶ ಯಲ್ಲಪ್ಪಗೌಡರ, ಸಂಜಯ ಗಿರೆಪ್ಪಗೌಡರ, ಬಿ.ಬಿ.ಸಂಗನಗೌಡರ, ಶಂಕರ ಚವಡಣ್ಣವರ,ಕುಮಾರ ಅಂಗಡಿ,  ಆಯ್.ಎಲ್.ಪಾಟೀಲ, ಪ್ರಶಾಂತ ಅಮ್ಮಿನಭಾವಿ, ನಾಗಪ್ಪ ಗುಂಡ್ಲೂರ್, ಮಾರುತಿ ತಿಗಡಿ ಇದ್ದರು.ಟ
ಕುಮಾರ ಬೊರಕನವರ ಸ್ವಾಗತಿಸಿದರು, 
ವಕಿಲ ದುಂಡೇಶ ಗರಗದ ನಿರೂಪಿಸಿ ವಂದಿಸಿದರು.

Latest Articles