ಕನ್ನಡ ಶಾಲೆಯ ಉಳಿವಿಗಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಮುಂದಾದ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮಸ್ತರು
- 14 Jan 2024 , 10:56 PM
- Belagavi
- 149
ಖಾನಾಪೂರ : ತಾಲೂಕಿನ ಲಿಂಗನಮಠ ಗ್ರಾಮ, ಸುಮಾರು 5000 ಜನ ಸಂಖ್ಯೆ ಹೊಂದಿದ ಅಭಿವೃದ್ಧಿ ಹೊಂದುತ್ತಿರುವ ಗ್ರಾಮವಾಗಿದೆ. ಗ್ರಾಮದಲ್ಲಿರುವ 1 ನೇ ತರಗತಿಯಿಂದ 7 ನೇ ತರಗತಿಯವರೆಗೆ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸುಮಾರು 200 ಸಂಖ್ಯೆ: ವಿದ್ಯಾರ್ಥಿ/ನಿಯರು ಶಿಕ್ಷಣ ಪಡೆಯುತ್ತಿರುತ್ತಾರೆ.ಆದರೆ ವಿದ್ಯಾರ್ಥಿಗಳಿಗೆ ಕುಳತುಕೊಳ್ಳಲು ಐದು ಕೊಠಡಿಗಳು ಮಾತ್ರ ಇದ್ದು. ಇದರಲ್ಲಿ ಎರಡು ಶಾಲೆ ಕಟ್ಟಡವು ಶಿಥಿಲಾವಸ್ತೆಯಲ್ಲಿರುವುದರಿಂದ ಈ ಕನ್ನಡ ಶಾಲೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಅನುಮೋದನೆಗೊಂಡಿದೆ ಮತ್ತು ಅನುಮೋದನೆಗೊಂಡ ನಂತರ ಶಾಲಾ ಕಟ್ಟಡ ಕೆಡವಲಾಗಿದೆ . ನಂತರ ಅನುಮೋದನೆ ರದ್ದಾಗಿದೆ . ಇದರಿಂದ ಗ್ರಾಮದಲ್ಲಿ ಮೂಲಭೂತ ಶಿಕ್ಷಣ ಪಡೆದುಕೊಳ್ಳಲು ಮಕ್ಕಳು ವಂಚಿತರಾಗಿದ್ದಾರೆ .
ಸರಿಯಾಗಿ ಕಟ್ಟಡ ಇಲ್ಲದ ಕಾರಣ್ ತರಗತಿಗಳು ಗಿಡದ ಕೆಳಗೆ ನಡೆಸುವ ಪರಿಸ್ಥಿತಿ ಉಂಟಾಗಿರುತ್ತದೆ. ಈ ಕುರಿತು ಮೇಲಾಧಿಕಾರಿಗಳಿಗೆ ಆರು ಏಳು ವರ್ಷಗಳಿಂದ ವಿನಂತಿಸಿಕೊಂಡರು ಕೆಡವಿದ ಕಟ್ಟಡ ಕಟ್ಟದೆ ಹಾಗೂ ಅನುಮೋದನೆ ನೀಡದ ಕಟ್ಟಡದಲ್ಲಿ ಬೇರೆ ಕಟ್ಟಡ ಕಟ್ಟುವ ವ್ಯವಸ್ಥೆ ಉಂಟಾಗಿದ್ದು ಇರುತ್ತದೆ ಎಂದು ತಿಳಿಸಿದ್ದಾರೆ .
ಇದರಿಂದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ತೊಂದರೆಯಾಗಿರುತ್ತದೆ. ಅಂಗನಮಕ ಗ್ರಾಮದಲ್ಲಿ ಕನ್ನಡ ಶಾಲೆಯ ಮಕ್ಕಳು ಪ್ರಾಥಮಿಕ ಮೂಲಭೂತ ಶಿಕ್ಷಣದಿಂದ ವಂಚಿತರಾಗಿದ್ದಾರೆ . ಈ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ಜಿಲ್ಲಾ ಪಂಚಾಯತಿಯವರಿಗೆ ಡಿ ಡಿ ಪಿ ಐ ಬೆಳಗಾವಿ ಹಾಗು ಜಿಲ್ಲಾಧಿಕಾರಿಯವರಿಗೆ ಸಾಕಷ್ಟು ಸಲ ವಿನಂತಿಸಿ ಮನವಿ ಮಾಡಿಕೊಂಡರು ಕನ್ನಡ ಶಾಲೆಗಳ ಉಳಿಸುವ ಕುರಿತು ಕೆಡವಿದ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡದೆ ಬೇಜವಾಬ್ದಾರಿತನ ತೋರಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ .
ಜನ ಕನ್ನಡ ಶಾಲೆ ಕೆಡವಿದ ಕಟ್ಟಡದಲ್ಲಿ ಬೇರೆ ಕಟ್ಟಡ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ . ಇದರಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ ಎಂದು ದೂರಿದ್ದಾರೆ. ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ ಅವಶ್ಯಕತೆ ಇರುತ್ತದೆ. ಹಾಗೂ ಅಂಗನಮಠ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಣದಿಂದ ಶಿಕ್ಷಣ ಪಡೆದುಕೊಳ್ಳಲು ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಹೇಳಿದ್ದಾರೆ .
ಈ ಕುರಿತು ಪಂಚಾಯತಿಯವರು ಸಹ ಮೇಲಾಧಿಕಾರಿಗಳಿಗೆ ತಿಳಿಹೇಳದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವ ಕಾರಣ ಲಿಂಗನಮಠ ಗ್ರಾಮದಲ್ಲಿ ಕನ್ನಡ ಶಾಲೆ ಉಳಿವಿಗಾಗಿ ಹೋರಾಟ ಮಾಡಲು ಗ್ರಾಮದ ಸಮಸ್ತ ನಾಗರಿಕರು ತಿರ್ಮಾನಿಸಿದ್ದಾರೆ. ಈ ಕುರಿತು ದಿನಾಂಕ 22-09-2022 ರಂದು ಮುಂಜಾನೆ 9.00 ಗಂಟೆಯಿಂದ ಲಿಂಗನಮಠ ಗ್ರಾಮದಲ್ಲಿ ರಸ್ತಾ ರೋಕೋ ಮಾಡಿ ನ್ಯಾಯ ಸಿಗುವವರೆಗೂ ಮಹಾತ್ಮಾ ಗಾಂಧಿಜಿ ಹಾಗೂ ಕನ್ನಡಾಂಬೆಯ ಫೋಟೋಗೆ ಮಾಲೆ ಹಾಕಿ ಶಾಂತಿಯುತವಾಗಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ .