ಜೋಗ ಜಲಪಾತದ ಸೌಂದರ್ಯ ನೋಡಲೇಬೇಕು ಎಂದರೆ ಮಳೆಗಾಲದಲ್ಲಿ ಬೇಟಿ ಕೂಡಲೇ ಬೇಕು

ಶಿವಮೊಗ್ಗಜೋಗ ಜಲಪಾತ ಹೆಸರು ಕೇಳಿದಾಗಲೇ ಮೈಯೆಲ್ಲಾ ರೋಮಾಂಚನವಾಗುತ್ತದೆ. ಕರ್ನಾಟಕದಲ್ಲಿನ ಅತೀ ಎತ್ತರದ ಜಲಪಾತಗಳ ಸಾಲಿಗೆ ಸೇರುವ ಈ ಜಲಪಾತದ ನಿಜವಾದ ಸೌಂದರ್ಯ ನೋಡಬೇಕಾದರೆ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದು. ಮಳೆಗಾಲದಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದು, ಎತ್ತರದಿಂದ ಧುಮ್ಮುಕ್ಕುವ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು.

promotions

ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತವು ಕರ್ನಾಟಕದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಶರಾವತಿ ನದಿಯಲ್ಲಿ ರಚಿಸಲಾದ ಜೋಗ್ ಫಾಲ್ಸ್ ಅನ್ನು ಗೆರುಸೊಪ್ಪೆ ಫಾಲ್ಸ್, ಗೆರುಸೊಪ್ಪಾ ಫಾಲ್ಸ್ ಮತ್ತು ಜೋಗದ ಗುಂಡಿ ಎಂಬೆಲ್ಲಾ ಪರ್ಯಾಯ ಹೆಸರುಗಳಿಂದಲೂ ಕರೆಯಲಾಗುತ್ತದೆ.

promotions

253 ಮೀಟರ್ ಎತ್ತರದಿಂದ ಕೆಳಕ್ಕೆ ಹರಿಯುವ ಶರಾವತಿ ನದಿಯಿಂದ ಜೋಗ್ ಫಾಲ್ಸ್ ರೂಪುಗೊಳ್ಳುತ್ತದೆ. ಈ ನದಿಯು ತೀರ್ಥಹಳ್ಳಿ ತಾಲ್ಲೂಕಿನ ಅಂಬುತಿರ್ಥದಲ್ಲಿ ಹುಟ್ಟಿಕೊಂಡಿದೆ. ಪಶ್ಚಿಮ ಘಟ್ಟಗಳ ಮೂಲಕ ವಾಯುವ್ಯಕ್ಕೆ ಹರಿಯುತ್ತದೆ ಮತ್ತು ಹೊನ್ನಾವರದಲ್ಲಿ ಅರೇಬಿಯನ್ ಸಮುದ್ರವನ್ನು ಸೇರುವ ಮೊದಲು ಜೋಗ ಜಲಪಾತವನ್ನು ರೂಪಿಸುತ್ತದೆ.

promotions

ನಾಲ್ಕು ಭಾಗಗಳಾಗಿ ಹರಿಯುವ ಶರಾವತಿ : ಶರವಾತಿ ನದಿಯು ನಾಲ್ಕು ಭಾಗಗಳಾಗಿ ಇಲ್ಲಿ ಜಲಪಾತವಾಗಿ ಧುಮ್ಮುಕ್ಕುತ್ತಿದ್ದಾಳೆ. ರಾಜ, ರಾಣಿ, ರೋರರ್, ರಾಕೆಟ್ ಎನ್ನುವ ನಾಲ್ಕು ಭಾಗಗಳಾಗಿ ಶರಾವತಿ ಹರಿಯುತ್ತಿದ್ದಾಳೆ. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು 829 ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ರೋರರ್ ಕೂಡಾ ಜಲಪಾತವನ್ನು ಸೇರುತ್ತದೆ. ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ಕೆಳಕ್ಕೆ ಧುಮ್ಮುಕುತ್ತದೆ, ಇನ್ನು ರಾಣಿ ಜಲಪಾತ ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಪ್ರಪಾತವನ್ನು ಸೇರುತ್ತದೆ.

ಭಾರತದ ಎರಡನೇ ಅತಿ ಎತ್ತರದಿಂದ ಧುಮುಕುವ ಈ ಜಲಪಾತವು ಕರ್ನಾಟಕದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿದ್ದು ರಾಜ್ಯದಲ್ಲಿನ ಅತೀ ಎತ್ತರದ ಜಲಪಾತವಾಗಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದರ ಸುಂದರ ನೋಟವು ನಿಜವಾಗಿಯೂ ಸ್ಮರಣೀಯ ಅನುಭವವನ್ನು ನೀಡುತ್ತದೆ.

ಎಲ್ಲಿದೆ ಜೋಗ ಜಲಪಾತ :
ಜೋಗ ಜಲಪಾತವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಸಾಗರದಿಂದ 30 ಕಿ.ಮೀ, ಶಿವಮೊಗ್ಗದಿಂದ 104 ಕಿ.ಮೀ ಮತ್ತು ಬೆಂಗಳೂರಿನಿಂದ 379 ಕಿ.ಮೀ ದೂರದಲ್ಲಿದೆ.

Read More Articles