ಒಮೈಕ್ರೋಮ್ ಹಾವಳಿ ರಾತ್ರಿ 10 ರ ಬಳಿಕ ಸ್ತಬ್ಧಗೊಂಡ ಬೆಳಗಾವಿ ನಗರ
- 15 Jan 2024 , 12:16 AM
- Belagavi
- 114
ಬೆಳಗಾವಿ: ಒಮಿಕ್ರಾನ್ ವೈರಸ್ ಭೀತಿಯಿಂದ ರಾಜ್ಯ ಸರಕಾರ ವಿಧಿಸಿರುವ ನೈಟ್ ಕರ್ಫ್ಯೂಯಿಂದ್ ಬೆಳಗಾವಿ ನಗರದಲ್ಲಿ ರಾತ್ರಿ 10 ಗಂಟೆಯ ಬಳಿಕ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಬ್ಧಗೊಂಡಿದೆ. ನಗರದಲ್ಲಿ ಪೊಲೀಸ್ ರು ಮುಂಜಾಗ್ರತಾ ಕ್ರಮವಾಗಿ ಎರಡೂ ಗಂಟೆಯ ಮುಂಚೆಯೇ ಎಲ್ಲ ಅಂಗಡಿಕಾರರಿಗೆ ಬರೋಬರಿ 10 ಗಂಟೆಗೆ ಬಂದ್ ಮಾಡಬೇಕೆಂಬ ಸೂಚನೆ ನೀಡಿದ್ದಾರೆ.
ನಗರದ ಗಣಪತಿಗಲ್ಲಿ, ಶನಿವಾರಕೂಟ, ಖಡೇಬಜಾರ್, ಸಮಾದೇವಿ ಮಂದಿರ, ಚನ್ನಮ್ಮ ವೃತ್ತ, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸದಾ ಜನಸಂದಣಿಯಿಂದ ಇರುತ್ತಿದ್ದ ನಗರ ರಾತ್ರಿ 10 ಗಂಟೆಗೆ ಸ್ಥಬ್ತವಾಗಿದೆ. ಅಗತ್ಯ ವಸ್ತುಗಳ ಬಳಕೆಯಾದ ಹಾಲು, ಔಷಧಿ ಅಂಗಡಿ, ಆಸ್ಪತ್ರೆ, ಕಾರ್ಖಾನೆಗಳಿಗೆ ತೆರಳುವ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ನಗರದಲ್ಲಿ ಸುತ್ತಲೂ ಪೊಲೀಸರು ಸುತ್ತುವರೆದಿದ್ದರು.
ಸರಕಾರ ಒಮಿಕ್ರಾನ್ ತಡೆಗೆ ವಿಧಿಸಿರುವ ನೈಟ್ ಕರ್ಫ್ಯೂ ಗೆ ಬೆಳಗಾವಿ ನಗರದ ಜನರು ಸಹಕಾರ ನೀಡಿದ್ದು, ಹೊಸವರ್ಷದ ಆಚರಣೆಯಂದು ಇದೇ ರೀತಿ ನೀಡಿದರೆ ಸರಕಾರ ಘೋಷಣೆ ಮಾಡಿದ ನೈಟ್ ಕರ್ಫ್ಯೂ ಗೆ ಅರ್ಥ ಬರುತ್ತದೆ.