ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂಗೆ ಜನ ಡೊಂಟ್ ಕೇರ್
- 15 Jan 2024 , 3:40 AM
- Belagavi
- 123
ಬೆಳಗಾವಿ: ಒಮೀಕ್ರಾನ್ ಜತೆಗೆ ಕೋವಿಡ್ 3 ನೇ ಅಲೆ ತಡೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂನ ಎರಡನೇ ದಿನವಾದ ಇಂದು ಕೂಡ ಕುಂದಾನಗರಿ ಬೆಳಗಾವಿಯಲ್ಲಿ ನಿರಸ ಪ್ರತಿಕ್ರಿಯೆ ದೊರಿತಾಯಿದೆ. ವಿಕೆಂಡ್ ಕರ್ಫ್ಯೂಗೆ ಜನ ಡೊಂಟ್ ಕೇರ್ ಎನ್ನುತ್ತಿದ್ದಾರೆ.
ಅಗತ್ಯ ವಸ್ತುಗಳ ಖರೀದಿ ಮತ್ತು ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇದ್ರೂ ಕೂಡ ಜನರು ಅಲ್ಲಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಕೆಲವು ಮಾರ್ಕೆಟ್ ಗಳಲ್ಲಿ ಜನರು ಮಾಸ್ಕ್ ಮರೆತು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳದೆ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ.
ಇನ್ನು ನಗರದಲ್ಲಿ ವಾಹನ ಸಂಚಾರವು ಬಿಂದಾಸ್ ಆಗಿ ನಡೀತಾನೆಯಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ಒಂದು ಬದಿ ರಸ್ತೆ ಬಂದ್ ಮಾಡಿದ್ರೆ ಇನ್ನೊಂದು ಬದಿಯಿಂದ ಜನರ ಓಡಾಟ ಇದ್ದು ವೆಹಿಕಲ್ ಚೆಕಿಂಗ್ ಪಾಯಿಂಟ್ನಲ್ಲಿ ಅಷ್ಟೊಂದು ಕಟ್ಟುನಿಟ್ಟಿನ ತಪಾಸಣೆ ಕೂಡ ನಡಿತಾಯಿಲ್ಲ.
ಜನರಿಗೆ ಅಂಕುಶ ಹಾಕುವ ಪೊಲೀಸರೇ ಮೈ ಮರೆತು ನಿಂತ್ರೆ ಜನರ ಓಡಾಟ ನಿಲ್ಲೋದು ಸಾಧ್ಯವಿಲ್ಲ. ಬೆಳಗಾವಿಯಲ್ಲಿ ದಿನೇದಿನೇ ಪಾಸಿಟಿವಿಟಿ ರೇಟ್ ಹೆಚ್ಚುತ್ತಿದ್ದರೂ ಎಲ್ಲೊ ಒಂದು ಕಡೆ ಜಿಲ್ಲಾಡಾಳಿತ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ ಎಂಬ ಸಂಶಯ ಜನರಲ್ಲಿ ಮೂಡುತ್ತಿದೆ.
ಒಟ್ಟಾರೆಯಾಗಿ ಸರ್ಕಾರ ಕಠಿಣ ನಿಯಮಗಳನ್ನು ತಂದ್ರು ಕೂಡ ಜನರು ಪಾಲಿಸದೇ ಅವುಗಳನ್ನು ಗಾಳಿಗೆ ತೂರಿ ನಡೆಯುವುದು ನಿಜಕ್ಕೂ ವಿಪರ್ಯಾಸ.