ಕಲಾವಿದರಿಗೆ ಆರ್ಥಿಕ ಸಹಾಯ ಮಾಡುವಂತೆ ಒತ್ತಾಯ
- 14 Jan 2024 , 9:48 PM
- Belagavi
- 121
ಬೆಳಗಾವಿ : ಲಾಕ್‌ಡೌನ್‌ನಿಂದ ನೊಂದ ಕಲಾವಿದರ ಕುಟುಂಬಕ್ಕೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಗುರುವಾರ ಬೆಳಗಾವಿ ಕಲಾವಿದರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ವಿವಿಧ ಕಲಾವಿದರಾದ ವೃತ್ತಿರಂಗ ಭೂಮಿ, ರಸಮಂಜರಿ, ಹವ್ಯ ದಿಂದ ಕಳೆದ ಹಾಗೂ ಧ್ವನಿವರ್ಧಕ ಸಂಘಗಳು ತಮ್ಮಲ್ಲಿ ಎರಡು ಮೂರು ವರ್ಷಗಳಿಂದ ಲಾಕ್‌ಡೌನ್ ಪರಿಣಾಮದಿಂದಾಗಿ ಸರ್ಕಾರದ ಯಾವ ಸಹಾಯ, ಅನುದಾನವಿಲ್ಲದೆ ತುಂಬಾ ಸಂಕಷ್ಟಕ್ಕಿಡಾಗಿ ಹೊಟ್ಟೆಗಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಈ ಸಲ ತಾವುಗಳು ಲಾಕ್‌ಡೌನ್ ಮಾಡುವುದಾದರೆ ನಮ್ಮ ಬೆಳಗಾವಿ ಜಿಲ್ಲೆಯ ಈ ಎಲ್ಲಾ ವೃತ್ತಿಪರ ಸಂಘದ ಪ್ರತಿ ಕಲಾವಿದರಿಗೆ ಪ್ರತಿ ತಿಂಗಳು 5,000 ರೂ. ಗಳನ್ನು ಪರಿಹಾರ ಧನವನ್ನು ನೀಡಿ ಬಡ ಕಲಾವಿದರ ಕುಟುಂಬಗಳನ್ನು ರಕ್ಷಣೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.