ಮೂರು ಮಕ್ಕಳ ಸಾವು ಪ್ರಕರಣ ಸರಕಾರದ ಆದೇಶದಲ್ಲಿ ಪರಿಹಾರ ಇಲ್ಲಾ:ಡಿಎಚ್ಓ ಮುನ್ಯಾಳ
- 15 Jan 2024 , 1:50 AM
- Belagavi
- 142
ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮೂರು ಮಕ್ಕಳು ಚುಚ್ಚುಮದ್ದು ತೆಗೆದುಕೊಂಡು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದರ ಹಿನ್ನಲೆಯಲ್ಲಿ ಮೃತರ ಕುಟುಂಬಕ್ಕೆ ಸರಕಾರದ ಮಟ್ಟದಲ್ಲಿ ಯಾವುದೇ ಪರಿಹಾರ ನೀಡುವ ಆದೇಶ ಇಲ್ಲ ಎಂದು ನಗರದಲ್ಲಿ ಬೆಳಗಾವಿ ಡಿಎಚ್ಓ ಎಸ್.ವಿ.ಮುನ್ಯಾಳ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಎಚ್ಓ ಎಸ್.ವಿ.ಮುನ್ಯಾಳ ಮಾತನಾಡಿ ಮಕ್ಕಳಿಗೆ ಚುಚ್ಚುಮದ್ದು ನೀಡಿರುವ ಕುರಿತು ಪ್ರಾಥಮಿಕ ತನಿಖೆ ಮುಖಾಂತರ ಮಾಹಿತಿ ತೆಗೆದುಕೊಂಡಿದ್ದೇವೆ ಆದರೆ ಇನ್ನು ಸಂಪೂರ್ಣ ಮಾಹಿತಿ ಪಡೆದುಕೊಂಡು ಕೂಲಂಕುಷವಾಗಿ ಅರಿತುಕೊಂಡು ಕ್ರಮ ಜರುಗಿಸಲಾಗುವುದು.ಈ ಘಟನೆ ಕುರಿತು ರಾಜ್ಯ ಮಟ್ಟದ ಆರೋಗ್ಯ ಇಲಾಖೆಗೆ ಮಾಹಿತಿ ಕೂಡಾ ನೀಡಲಾಗಿದೆ ಎಂದು ತಿಳಿಸಿದರು.
ಆದರೆ ನೀಡಿರುವಂತಹ ಎಲ್ಲಾ ಲಸಿಕೆಗಳನ್ನ ತಪಾಸಣೆಗೊಳಪಡಿಸಿ ಮತ್ತು ಪ್ರಾಥಮಿಕ ಔಷಧಿ ವಿತರಣಾ ಅಧಿಕಾರಿಗಳನ್ನ ತನಿಖೆಗೊಳಪಡಿಸಿ ಮಾಹಿತಿ ಪಡೆಯಲಾಗುವುದು, ಹಾಗೇಯೆ ಚುಚ್ಚುಮದ್ದು ನೀಡಿದ್ದರ ಕುರಿತು ಸದ್ಯಕ್ಕೆ ಇಬ್ಬರನ್ನ ಅಮಾನತ್ತುಗೊಳಿಸಲಾಗಿದೆ.ಇದರ ಕುರಿತು ಇನ್ನಷ್ಟು ಸಂಪೂರ್ಣ ಮಾಹಿತಿ ಪಡೆದುಕೊಂಡು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇನ್ನು ಪೋಸ್ಟ್ ಮಾರ್ಟನ ರಿಪೊರ್ಟ ಬಂದ ನಂತರ ಸಂಪೂರ್ಣ ಮಾಹಿತಿ ತಿಳಿದು ಬರುತ್ತದೆ ಆ ಮೇಲೆ ಹೆಚ್ಚಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.