ರಾಜ್ಯದಲ್ಲಿ 50 ಅಕ್ಕ ಕೆಫೆ - ಬೇಕರಿಗಳು: ಮಹಿಳಾ ಸಬಲೀಕರಣಕ್ಕೆ ಹೊಸ ಯೋಜನೆ

ಬೆಂಗಳೂರು: ರಾಜ್ಯ ಸರ್ಕಾರವು ಮಹಿಳೆಯರ ಸ್ವಾವಲಂಬನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳೆಯರೇ ನಡೆಸುವ 50 ‘ಅಕ್ಕ ಕೆಫೆ - ಬೇಕರಿ’ಗಳನ್ನು ತೆರೆಯಲಾಗುವುದು. ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಈ ವಿಷಯವನ್ನು ಪ್ರಕಟಿಸಿದ್ದು, ಈ ಯೋಜನೆಯ ಮೂಲಕ ಮಹಿಳೆಯರು ಸ್ವತಃ ಕಫೆ ಮತ್ತು ಬೇಕರಿ ಉದ್ಯಮವನ್ನು ನಡೆಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯವಾಗುತ್ತದೆ ಎಂದು ತಿಳಿಸಿದರು.

promotions

ಈ  ಬೇಕರಿಗಳು ಮಹಿಳೆಯರಿಗೆ ಸ್ವಂತ ಉದ್ಯಮ ನಡೆಸುವ ಅವಕಾಶ ನೀಡುವುದರ ಜೊತೆಗೆ, ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೂ ಬೆಂಬಲ ನೀಡಲಿವೆ. ಮಹಿಳೆಯರು ತಮ್ಮ ಜೀವನದಲ್ಲಿ ಹೊಸ ದಿಕ್ಕು ನೀಡುವ ಈ ಪ್ರಯತ್ನವು ಸ್ವಾವಲಂಬನೆಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ.

promotions

ಈ ಯೋಜನೆಯು ಮಹಿಳೆಯರ ನೇತೃತ್ವವನ್ನು ಉತ್ತೇಜಿಸಲು ಹಾಗೂ ಅವರ ಉದ್ಯಮಶೀಲತೆ ಮತ್ತು ನಾಯಕತ್ವವನ್ನು ಬೆಳಸಲು ಹೊಸ ದಾರಿ ತೆರೆದು, ಇನ್ನಷ್ಟು ಮಹಿಳೆಯರನ್ನು ಉದ್ಯಮಿಗಳಾಗಲು ಪ್ರೇರೇಪಿಸಲು ಸಹಾಯ ಮಾಡಲಿದೆ.

Read More Articles