
ಧರ್ಮಸ್ಥಳ ಸಂಘದ ವತಿಯಿಂದ ಒತ್ತಡದ ನಿರ್ವಹಣೆ, ಯಶಸ್ವಿ ಬದುಕಿನತ್ತ ಮಹಿಳೆ ವಿಚಾರಗೋಷ್ಠಿ
ಧಾರವಾಡ- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಧಾರವಾಡ ಗ್ರಾಮೀಣ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ, ತಾಲೂಕು ಮಟ್ಟದ ವಿಚಾರ ಗೋಷ್ಠಿ ಇದೇ 13 ರಂದು ಗುಡ್ಡದಮಠ ಸಭಾಭವನ ಕೆಲಗೇರಿಯಲ್ಲಿ ಜರುಗಲಿದೆ.

ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಕಾರ್ಯಕ್ರಮ ಉದ್ಘಾಟಿಸುವರು. ಮಹಾನಗರ ಪಾಲಿಕೆಯ ಸದಸ್ಯೆ ಚಂದ್ರಕಲಾ ಕೊಟಬಾಗಿ ಅಧ್ಯಕ್ಷತೆ ವಹಿಸುವರು ಅಥಿತಿಗಳಾಗಿ ಜಿಲ್ಲಾ ನಿರ್ದೇಶಕ ಹನಮಂತ ನಾಯ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನೀತಾ ಪಾಟೀಲ, ಯೋಜನಾಧಿಕಾರಿಸುಧಾ ನಾಯಿಕ ಆಗಮಿಸುವರು.

ಒತ್ತಡ ನಿರ್ವಹಣೆಯೊಂದಿಗೆ ಯಶಸ್ವಿ ಬದುಕಿನತ್ತ ಮಹಿಳೆ ವಿಚಾರಗೋಷ್ಠಿಯನ್ನು ಮಹಿಳಾ ವಿದ್ಯಾಪೀಠದ ಉಪನ್ಯಾಸಕಿ ರೇಣುಕಾ ಗಂಗೂರ ಮಂಡಿಸಲಿದ್ದಾರೆಂದು ಜ್ಞಾನವಿಕಾಸದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









