ಮೆಕ್ಸಿಕೊದಲ್ಲಿ ಮೊಟ್ಟ ಮೊದಲ ಬಾರಿಗೆ ಏವಿಯನ್ ಫ್ಲೂ ಪ್ರಕರಣ: ವ್ಯಕ್ತಿಯ ಸಾವು

ಮೆಕ್ಸಿಕೊ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದು, ಮೆಕ್ಸಿಕೊದಲ್ಲಿ 59 ವರ್ಷದ ವ್ಯಕ್ತಿಯೊಬ್ಬರಲ್ಲಿ ಏವಿಯನ್ ಫ್ಲೂ ಕಾಣಿಸಿಕೊಂಡಿದ್ದು, ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದು ಜಾಗತಿಕವಾಗಿ ವರದಿಯಾದ A(H5N2) ಉಪ ಪ್ರಕಾರದ ಹಕ್ಕಿ ಜ್ವರದ ಮೊದಲ ಪ್ರಯೋಗಾಲಯ-ದೃಢೀಕರಿಸಿದ ಮಾನವ ಪ್ರಕರಣವಾಗಿದೆ.

promotions

ಮೆಕ್ಸಿಕೋದ ವ್ಯಕ್ತಿ ಜ್ವರ, ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ ಮತ್ತು ಸಾಮಾನ್ಯ ಅಸ್ವಸ್ಥತೆಯನ್ನು ಅನುಭವಿಸಿ, ಏಪ್ರಿಲ್ 24 ರಂದು ನಿಧನರಾದರು ಎಂದು WHO ಹೇಳಿದೆ. ಮೆಕ್ಸಿಕೋದಲ್ಲಿ ಈ ವ್ಯಕ್ತಿಯಲ್ಲಿ ಮೊದಲ H5 ವೈರಸ್ ಸೋಂಕು ದೃಢಪಟ್ಟಿದೆ. ಆದಾಗ್ಯೂ, ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಕೋಳಿ ಅಥವಾ ಇತರ ಪ್ರಾಣಿಗಳ ಜೊತೆ ಸಂಪರ್ಕ ಹೊಂದಿರಿಲ್ಲ ಎಂದು WHO ತಿಳಿಸಿದೆ.

promotions

ಮೆಕ್ಸಿಕೋದಲ್ಲಿ A(H5N2) ಉಪವಿಧದ ಏವಿಯನ್ ಇನ್ಫ್ಲುಯೆಂಜಾದ ಪ್ರಕರಣಗಳು ಕೋಳಿಗಳಲ್ಲಿ ವರದಿಯಾಗಿವೆ. ಈ ಘಟನೆಯಿಂದ ಏವಿಯನ್ ಫ್ಲೂ ಸೋಂಕಿನ ಹಾನಿ ಕುರಿತು ಮತ್ತಷ್ಟು ಎಚ್ಚರಿಕೆಗೊಳ್ಳುವ ಅಗತ್ಯವಿದೆ. WHO ಮುಂದಿನ ಕ್ರಮಗಳ ಕುರಿತು ಶೀಘ್ರದಲ್ಲಿ ವಿವರ ನೀಡಲಿದೆ.

Read More Articles