ಸಿಗದ ಕನ್ಯೆ, ಬ್ಯಾಚುಲರ್ ನೇಣಿಗೆ ಶರಣು..ಅಷ್ಟಕ್ಕೂ ಕಾರಣವೇನು?

ಬೆಂಗಳೂರು: ಇತ್ತೀಚೆಗೆ ಶ್ರೀಮಂತ, ಸುಂದರ ವರನನ್ನು ಹುಡುಕುತ್ತಿರುವ ಕನ್ಯೆಯರು ಶ್ರೀ ಸಾಮಾನ್ಯನನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವ ಕಾರಣ ಸಾಕಷ್ಟು ಯುವಕರು ಇನ್ನೂ ಬ್ಯಾಚುಲರ್‌ಯಾಗಿಯೇ ಇದ್ದು, ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಬೆಂಗಳೂರಿನಲ್ಲಿ ಘಟನೆಯೊಂದು ನಡೆದಿದ್ದು, ತನಗೆ ಹೆಣ್ಣು ಸಿಗಲಿಲ್ಲವೇಂದು ನೇಣಿಗೆ ಶರಣಾಗಿದ್ದಾನೆ. 

promotions

ತಾನು ದಪ್ಪಗಿದ್ದು, ತನ್ನದೇ ದೇಹವನ್ನು ಹೋಲುವಂತ ದಪ್ಪಗಿನ ಹುಡುಗಿ ಮದುವೆಯಾಗಲು ಸಿಗುತ್ತಿಲ್ಲ ಎಂಬುದಾಗಿ ಮನನೊಂದು ಯುವಕ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ. ಈಘಟನೆ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ನಡೆದಿದೆ. ನಾರಾಯಣಪ್ಪನಪಾಳ್ಯದಲ್ಲಿ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಂತ ವೆಂಕಟೇಶ್(29) ಮೃತ ವ್ಯಕ್ತಿ. ಈ ಯುವಕ ಮದುವೆಯಾಗೋದಕ್ಕಾಗಿ ಹುಡುಗಿಯನ್ನು ಹುಡುಕುತ್ತಿದ್ದನು. ಸುಮಾರು 15 ಹುಡುಗಿಯರನ್ನು ನೋಡಿದ್ದರೂ ವೆಂಕಟೇಶ್ ದಪ್ಪ ಇದ್ದಾನೆ ಅಂತ ಹುಡುಗಿ ಹಾಗೂ ಪೋಷಕರು ಮದುವೆ ನಿರಾಕರಿಸಿದ್ದರು.

promotions

ತನ್ನಷ್ಟೇ ದಪ್ಪಗಿರುವಂತ ಹುಡುಗಿ ಸಿಗುತ್ತಿಲ್ಲ ಎಂಬುದಾಗಿ ಮನನೊಂದ ಆಟೋ ಚಾಲಕ ವೆಂಕಟೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವೆಂಕಟೇಶ್ ಚಿಕ್ಕಮ್ಮ ಪೋನ್ ಮಾಡಿದರೂ ಪೋನ್ ಪಿಕ್ ಮಾಡಿರಲಿಲ್ಲ. ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬoಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More Articles