ತಡರಾತ್ರಿ ಹೊತ್ತಿ ಉರಿದ ಕಾರ.ಸುಟ್ಟು ಕರಕಲಾದ ವ್ಯಕ್ತಿ
- shivaraj B
- 2 Oct 2024 , 3:59 PM
- Chikodi
- 314
ಚಿಕ್ಕೋಡಿ : ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಕಳೆದ ರಾತ್ರಿ ಕಾರೊಂದು ಧಗಧಗಿಸಿ ಹೊತ್ತಿ ಉರಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಜೈನಾಪುರ ಗ್ರಾಮದ ಹೊರವಲಯದ ಬಳಿ ನಡೆದಿದೆ.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅದರ ತೀವ್ರತೆಗೆ ಕಾರಲ್ಲಿದ್ದ ವ್ಯಕ್ತಿ ಪೈರೋಜ್ ಬಡಗಾಂವ(40) ಕೂಡಾ ಸುಟ್ಟುಕರಕಲಾಗಿದ್ದಾನೆ.
ಪೈರೋಜ್ ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟ್ ನಿವಾಸಿ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ, ಪರಿಶೀಲನೆ ನಡರಸಿದ್ದಾರೆ. ಸುಟ್ಟ ಕಾರ್ ಹಾಗೂ ಮೃತದೇಹ ಪರಿಶೀಲಿಸುತ್ತಿರುವ FSL ಟೀಂ.
ಇದು ಅಪಘಾತವೋ ಅಥವಾ ಕೊಲೆಯೋ ಎಂದು ಅನುಮಾನ ವ್ಯಕ್ತಪಡಿಸುತ್ತಿರುವ ಸ್ಥಳೀಯರು.
ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.