ಭಯಾನಕ ಅಂತ್ಯ ಕಂಡ ತ್ರಿಕೋನ ಪ್ರೇಮ :ಬೆಚ್ಚಿಬೀಳಿಸಿದ ಡಬಲ್ ಮರ್ಡರ್ ಕಥೆ
- krishna shinde
- 31 Jan 2024 , 7:13 PM
- Belagavi
- 632
ಅಥಣಿ : ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದ್ದ ಡಬಲ್ ಮರ್ಡರ್ ಹಿಂದೆ ರೋಚಕ ಕಥೆ ಅಡಗಿದ್ದು ಪೊಲೀಸರ ನಿದ್ದೆಗೆಡಿಸಿದೆ. ಗಂಡ ಹಾಗೂ ಹೆಂಡತಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದ್ದು ಇದಕ್ಕೆಲ್ಲ ಹಿಂದಿನ ಪ್ರೇಮವೇ ಕಾರಣವಾಗಿದೆ.
ಮದುವೆಯಾಗಿದ್ದ ಪತ್ನಿ ಕೈ ಕೊಟ್ಟಿದ್ದಕ್ಕೆ ಹೆಂಡತಿ ಹಾಗೂ ಆಕೆಯ ಪ್ರಿಯತಮನನ್ನು ಮಾಜಿ ಪತಿ ಕೊಚ್ಚಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಹೊರವಲಯದಲ್ಲಿ ನಡೆದ ಡಬಲ್ ಮರ್ಡರ್ ಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದೆ. ಘಟನೆಯಲ್ಲಿ ಯಾಸಿನ ಬಾಗೊಡೆ (21) ಹೀನಾಕೌಸರ್ ಸುದಾರಾಣೆ (19) ಕೊಲೆಯಾದ ನವ ಜೋಡಿಗಳು.
ಕಳೆದ 4 ತಿಂಗಳ ಹಿಂದೆ ಹೀನಾಕೌಸರ ಹಾಗೂ ತೌಫಿಕ್ ಎಂಬ ಯುವಕನ ನಡುವೆ ಮದುವೆ ಆಗಿತ್ತು. ಅದರೆ
ಮದುವೆಯಾದ ಒಂದೇ ತಿಂಗಳಿನಲ್ಲಿ ಯುವತಿ ಹೀನಾ ಇವಳು ಯಾಸೀನ್ ಎಂಬಾತನ ಜೋತೆ ಓಡಿ ಹೋಗಿದ್ದಳು. ಈ ಹಿಂದೆಯೇ ಇಬ್ಬರು ಪ್ರೀತಿಯಲ್ಲಿ ಇದ್ದರು ಯುವತಿ ಹೀನಾಕೌಸರ್ ಮೊದಲನೆ ಗಂಡ ತೌಫೀಕ್ ಗೆ ಹೇಳಿರಲಿಲ್ಲ.
ತೌಫಿಕ್ ನನ್ನು ಬಿಟ್ಟು ಹೋಗಿದ್ದ ಹೀನಾಕೌಸರ್ ಯಾಸಿನ್ ಜೊತೆ ಪರಾರಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯನ್ನು ಆಗಿದ್ದಳು.
ಇದೇ ಕೋಪದಲ್ಲಿದ್ದ ಯುವಕ ತೌಫಿಕ್ ಮೊದಲ ಪತ್ನಿ ಹೀನಾಕೌಸರ್ ಹಾಗೂ ಆತನ ಗಂಡ ಯಾಸೀನ್ ಇಬ್ಬರನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ತನಗೆ ಕೈ ಕೊಟ್ಟವಳು ಬದುಕಬಾರದು ಹಾಗೆ ಆಕೆ ಸಂಸಾರವೂ ಇರಬಾರದು ಎಂದು ಈ ರೀತಿಯ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.