ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪಿ
- shivaraj bandigi
- 12 Jun 2024 , 12:45 PM
- Belagavi
- 3602
ಬೆಳಗಾವಿ : ಹಿರಿಯ ಐಪಿಎಸ್ ಅಧಿಕಾರಿ ಅಲೋಕಕುಮಾರ ಅವರಿಗೆ ಜೈಲಿನಲ್ಲಿದ್ದುಕೊಂಡೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ಇಂದು ನ್ಯಾಯಾಲಯಕ್ಕೆ ಕರೆತಂದ ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ನ್ಯಾಯಾಲಯದ ಆವರಣದಲ್ಲಿಯೇ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾನೆ.
ಘೋಷಣೆ ಕೂಗುತ್ತಿದ್ದಂತೆ ಸಾರ್ವಜನಿಕರು, ವಕೀಲರು ಧರ್ಮದೇಟು ನೀಡಿದ್ದಾರೆ. ಆರೋಪಿಗೆ ಧರ್ಮದೇಟು ಬೀಳುತ್ತಿದ್ದಂತೆ ಎಪಿಎಂಸಿ ಪೋಲಿಸರು ಆರೋಪಿಯನ್ನು ರಕ್ಷಣೆ ಮಾಡಿ ಹೊರ ಕರೆದುಕೊಂಡು ಬಂದು
ತಕ್ಷಣವೇ ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಜಯೇಶ ಪೂಜಾರಿ ಹಿಂಡಲಗಾ ಜೈಲಿನಲ್ಲಿದ್ದುಕೊಂಡು ಅಲೋಕಕುಮಾರ ಅವರಿಗೆ ಜೀವ ಬೆದರಿಕೆ ಹಾಕಿದ್ದ ಕೇಸ್ ಹಿನ್ನಲೆಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು,
ಈ ಹಿಂದೆಯೂ ಕೂಡಾ ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಜೈಲಿನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಕೋರ್ಟ್ ನಲ್ಲಿ ತನ್ನ ಅಹವಾಲು ಸ್ವೀಕರಿಸುತ್ತಿಲ್ಲ ಅಂತಾ ಪಾಕ್ ಪರ ಘೋಷಣೆ ಕೂಗಿ ವಿಕೃತಿ ಮೆರೆದಿದ್ದಾನೆ.