ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಬೈಲಹೊಂಗಲದಲ್ಲಿ ಕೃಷಿಮೇಳ, ಜಾನುವಾರು ಜಾತ್ರೆ

ಬೈಲಹೊಂಗಲ : ಪಟ್ಟಣದ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಪಶು ಸಂಗೋಪನೆ ಇಲಾಖೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ತೋಟಗಾರಿಕೆ ಇಲಾಖೆ, ಕೃಷಿ ಪರಿಕರ ಮಾರಾಟಗಾರರ ಸಂಘ, ಗ್ರಾಮೀಣ ಜಾಗೃತ ನಾಗರೀಕರ ವೇದಿಕೆ ಬೈಲಹೊಂಗಲ ಮತ್ತು ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಇವರ ಸಹಯೋಗದಲ್ಲಿ ಆಯೋಜಿಸಲಾದ ಕೃಷಿ ಮೇಳ ಹಾಗೂ ಜಾನುವಾರು ಪ್ರದರ್ಶನವನ್ನು ಶಾಖಾ ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಈಶ್ವರಿಯ ವಿಶ್ವವಿದ್ಯಾಲಯದ ಪ್ರಭಾ ಅಕ್ಕನವರು,ವೇ,ಮೂ, ಮಹಾಂತಯ್ಯಾ ಆರಾದ್ರಿಮಠ ಶಾಸ್ತ್ರೀಗಳ ಸಾನಿಧ್ಯದಲ್ಲಿ ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ದರ್ಶನಪುರ ಉದ್ಘಾಟಿಸಿ, 

promotions

  ಮಾತನಾಡಿ, ಕೃಷಿ ಪ್ರಧಾನ ದೇಶದಲ್ಲಿ ಅನ್ನದಾತನಿಗೆ ಸರಿಯಾದ ಸೌಕರ್ಯ ಸಿಗದಿರುವದು ವಿಪರ್ಯಾಸ ಎಂದರು. 

promotions

ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಪರದಾಡುತ್ತಿದ್ದಾನೆ. ದೇಶಕ್ಕೆ ಅನ್ನ ಹಾಕುವ ರೈತನ ಬಗ್ಗೆ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದರು.  

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಜಾತ್ರಾ ಮಹೋತ್ಸವದ ಪ್ರಯುಕ್ತ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೃಷಿ ಮೇಳ ಹಾಗೂ ಜಾನುವಾರು ಪ್ರದರ್ಶನ ಏರ್ಪಡಿಸಿರುವದು ಶ್ಲಾಘನೀಯ ಎಂದರು. 

ಚ. ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಸಮ್ಮೇಳನ ಆಯೋಜಕರಾದ ಶಿವರಂಜನ ಬೋಳಣ್ಣವರ, ಮಡಿವಾಳಪ್ಪ ಹೋಟಿ, ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ, ಮಹಾಂತೇಶ ತುರಮರಿ, ಬಿ.ಬಿ.ಗಣಾಚಾರಿ,ಗುರು ಮೆಟಗುಡ್ಡ, ಕಲಾವಿದ ಸಿ. ಕೆ. ಮೆಕ್ಕೇದ, ಸುಭಾಷ್ ತುರಮರಿ ಹಾಗೂ ಕಾಲೇಜು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಇದ್ದರು.

Read More Articles