ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ ಎಲ್ಲ ಸಮುದಾಯದ ಶ್ರೀಗಳ ಭೇಟಿ
- 15 Jan 2024 , 2:38 AM
- Belagavi
- 277
ಬೆಳಗಾವಿ ನಗರದ ಶ್ರೀ ಗುರುಶಾಂತೇಶ್ವರ ಸಂಸ್ಥಾನದ ಹುಕ್ಕೇರಿ ಶಾಖೆಗೆ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಗಾಣಿಗೇರ ಪೀಠದ ವಿಜಯಪುರ ವನಶ್ರೀ ಮಠದ ಬಸವಕುಮಾರ ಸ್ವಾಮೀಜಿ, ಚಿತ್ರದುರ್ಗದ ಮೇದಾರಕೇತೇಶ್ವರ ಮಹಾಮಠ ಇಮ್ಮಡಿ ಬಸವಮೇದಾರ ಕೇತೇಶ್ವರ ಸ್ವಾಮೀಜಿ, ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ, ಗಾವಂದೂರ ಮೋಕ್ಷಪತಿ ಸ್ವಾಮೀಜಿ, ಶ್ರೀ ಮಲಗಾನ ಹಿರೇಮಠ ಜಡೇಶಾಂತಲಿಂಗಾಚಾರ್ಯ ಸ್ವಾಮೀಜಿ, ದಾವಣಗೆರೆಯ ಶ್ರೀ ಬಸವಚೇತನ ಸ್ವಾಮೀಜಿ, ತೇಲಸಂಗ ಹಿರೇಮಠ ಶ್ರೀ ವಿಶ್ವೇಶ್ವರ ದೇವರು, ಬೆಳಗಾವಿ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಗೌರವವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಚಂದ್ರಶೇಖರ ಶಿವಾಚಾರ್ಯರು ಎಲ್ಲರೊಂದಿಗೆ ಬೆರೆತು ಕಾರ್ಯ ಮಾಡುವ ಅಪರೂಪದ ಸ್ವಾಮೀಜಿ. ಇವತ್ತು ನಾವೆಲ್ಲರೂ ಶ್ರೀಮಠಕ್ಕೆ ಬಂದು ಸಂತಸಪಟ್ಟಿದ್ದೇವೆ ಎಂದರು.
ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಜಗದ್ಗುರು, ಪಂಚಪೀಠಾಧೀಶರು, ವೀರಕ್ತಮಠಾಧೀಶರು, ಅದ್ವೈತ ಪರಂಪರೆಯ ಸ್ವಾಮೀಜಿ ಹಾಗೂ ಎಲ್ಲ ಸ್ವಾಮೀಜಿಯವರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ ಎಂದರು.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲಾ ಕಾವಿಧಾರಿಗಳು ಭಾರತದ ದೊಡ್ಡ ಆಸ್ತಿ. ಭಾರತ ಇವತ್ತು ಜಗದ್ಗುರು ಸ್ಥಾನದಲ್ಲಿದೆ ಎಂದರೆ ಅದು ದೇಶದ ತ್ಯಾಗದಿಂದ ತ್ಯಾಗದ ಸಂಕೇತವೇ ಕಾವಿ ಎಲ್ಲ ಪರಮಪೂಜ್ಯರು ಬಂದು ಮಠದ ಕಾರ್ಯ ನೋಡಿ ಸಂತಸ ಪಟ್ಟಿದ್ದು ಅಭಿಮಾನದ ಸಂಗತಿ ಎಂದರು.