ಗಡಿಯಲ್ಲಿ ಮತ್ತೊಂದು ರಕ್ತ ಚರಿತೆ; ಕೊಲೆ ಸ್ಥಿಯಲ್ಲಿ ಶವ ಪತ್ತೆ

ಅಥಣಿ :ಕೊಲೆ ಮಾಡಿ ಬಸ್ ನಿಲ್ದಾಣದಲ್ಲಿ ಶವ ಎಸೆದು ದುಷ್ಕೃತ್ಯವೆಸಗಿರುವ ಘಟನೆ ಅನಂತಪುರ ಗ್ರಾಮದಲ್ಲಿ ನಡೆದಿದೆ.

promotions

ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದ ಚೆನ್ನಮ್ಮ ಸರ್ಕಲ್ ನಲ್ಲಿರುವ ಬಸ್ ನಿಲ್ದಾಣದಲ್ಲಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.ನೆರೆಯ ಮದಭಾವಿ ಗ್ರಾಮದ ಅಪ್ಪಸಾಬ ಸಿದ್ದಪ್ಪ ಕಾಂಬಳೆ(37) ಮೃತ ದುರ್ದೈವಿಯಾಗಿದ್ದಾನೆ.

promotions

ಮೃತ ಅಪ್ಪಸಾಬ ನಿನ್ನೆ ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾನೆ. ರಾತ್ರಿ 9:00 ಗಂಟೆ ಸುಮಾರಿಗೆ ಮಡದಿಗೆ ಫೋನ್ ಕರೆ ಮಾಡಿ ಮಶೀನ್ ರಿಪೇರಿ ಇದೆ ಇವತ್ತು ಊರಿಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದಾನೆ ಬೆಳಗಾಗುತ್ತಲೇ ಗಂಡ ಅಪಾಸಾಬ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಥಣಿ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ : ರಾಹುಲ್  ಮಾದರ

Read More Articles