ಅದ್ದೂರಿಯಾಗಿ ನಡೆದ ಅಪ್ಪಯ್ಯ ಸ್ವಾಮಿ ಕಳಸಾರೋಹಣ ಕಾರ್ಯಕ್ರಮ
- shivaraj B
- 29 Aug 2024 , 9:42 AM
- Athani
- 159
ಅಥಣಿ : ಪವಾಡ ಸಿದ್ಧಿಪುರುಷ ಕಾಲಜ್ಞಾನಿಯಾದ ಅಪ್ಪಯ್ಯಸ್ವಾಮಿಗಳ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಲಾಯಿತು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನೂತನವಾಗಿ ಕಟ್ಟಿರುವ ಶಿಖರಕ್ಕೆ ಪರಮಪೂಜ್ಯರಾದ ನಾಗನೂರು ರುದ್ರಾಕ್ಷಿ ಮಠದ ಡಾಕ್ಟರ್ ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಕಳಸಾರೋಹಣ ಕಾರ್ಯಕ್ರಮವನ್ನು ನೆರ್ವೇರಿಸಲಾಯಿತು, ಮುಂಜಾನೆ ಧಾರ್ಮಿಕ ವಿಧಿ ವಿಧಾನದಂತೆ ಕೃಷ್ಣಾ ನದಿಯಿಂದ ಅಪ್ಪಯ್ಯ ಮಹಾಸ್ವಾಮಿಗಳ ದೇವಸ್ಥಾನದವರೆಗೆ ಬೆಳ್ಳಿರಥದಲ್ಲಿ ಕಳಸವನ್ನು ಕುಂಭಮೇಳದ ಜೊತೆಗೆ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡುತ್ತಾ ಕಳಸಾರೋಹಣ ಕಾರ್ಯಕ್ರಮವನ್ನು ಪೂರ್ಣಮಾಡಲಾಯಿತು.
ವರದಿ : ರಾಹುಲ್ ಮಾದರ