700 ಡಿಗ್ರೂಪ್ ನೌಕರರ ನೇಮಕಕ್ಕೆ ಅನುಮತಿ: ಪ್ರಕ್ರಿಯೆ ಶೀಘ್ರ ಆರಂಭ
ಬೆಂಗಳೂರು: ಪಶುಪಾಲನಾ ಇಲಾಖೆಯಲ್ಲಿ 700 ‘ಡಿ’ ಗ್ರೂಪ್ ನೌಕರರ ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದಾರೆ. ಈ ಕುರಿತಂತೆ ಪಶುಸಂಗೋಪನಾ ಸಚಿವರಾದ ಕೆ. ವೆಂಕಟೇಶ್ ಪ್ರಕಟಣೆ ನೀಡಿದ್ದಾರೆ. ಅವರು ತಿಳಿಸಿದಂತೆ, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಖಾಲಿ ಇರುವ 700 ಹುದ್ದೆಗಳ ಭರ್ತಿಗಾಗಿ ಕ್ರಮ ಕೈಗೊಳ್ಳಲಾಗುವುದು.
ಸಚಿವರು ಈ ಕುರಿತು ಹೇಳಿದ್ದು, ಮುಖ್ಯಮಂತ್ರಿಗಳ ಅನುಮತಿ ಮೂಲಕ ಇಲಾಖೆಗೆ ಬೇಕಾದ ‘ಡಿ’ ಗ್ರೂಪ್ ಸಿಬ್ಬಂದಿಯ ನೇಮಕಾತಿ ಸಾಧ್ಯವಾಗಿದ್ದು, ಇದು ಇಲಾಖೆಯ ಕಾರ್ಯಚಟುವಟಿಕೆಗಳ ಸುಗಮತೆಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು