ಶಿಕ್ಷಕರು ಶಾಲೆಗೆ ಚಕ್ಕರ್ ಹಾಕಿದ್ರೆ ಎಚ್ಚರ: ಸಚಿವ ಮಧು ಬಂಗಾರಪ್ಪ

ಬೆಳಗಾವಿ : ಶಾಲೆಗೆ ಚಕ್ಕರ ಹಾಕಿ ಬೇರೆ ಬೇರೆ ಕೆಲಸ ಮಾಡುವ ಶಿಕ್ಷಕರ ಮೇಲೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

Your Image Ad

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರಾದವರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕು. ಅದನ್ನು ಬಿಟ್ಟು ಬೇರೆ ಬೇರೆ ಕೆಲಸ, ಸಂಘಟನೆಯಲ್ಲಿ ಗುರುತಿಸಿಕೊಂಡರೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.

Your Image Ad

ಶಿಕ್ಷಕರು ಪ್ರತಿಭಟನೆ ಮಾಡುವ ಹಕ್ಕು ಇದೆ. ಹಾಗಂತ ಬೇರೆ ಬೇರೆ ಕಾರಣಗಳಿಂದ ಶಾಲೆಗಳಿಗೆ ಚಕ್ಕರ ಹಾಕುವ ಶಿಕ್ಷಕರಿಂದ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದಿ ಎಂದರು.

Your Image Ad

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಸಾಹೇಬ್ರನ ಇಳಿಸೊಕೆ ಯಾರಿಂದಲೂ ಸಾಧ್ಯವಿಲ್ಲ. ಕೋರ್ಟ್ ಅನೋದು ನ್ಯಾಯಾಲಯದ ಒಂದು ಸಿಸ್ಟಮ್ ಅದು ತಾನಾಗಿಯೇ ನಡೆದುಕೊಂಡು ಹೋಗುತ್ತದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಅನೋದು ನಮ್ಮೆಲ್ಲರ ಆಸೆ, ಅವರು ಕಂಟಿನ್ಯೂವ ಆಗುತ್ತಾರೆ ಎಂದರು.

Your Image Ad

ಕೋರ್ಟ್ ನಲ್ಲಿ ಅರವಿಂದ ಕ್ರೆಜಿವಾಲ್, ಮಮತಾ ಬ್ಯಾನರ್ಜಿಯ ಕೇಸ್ ಇದೆ, ಇವರಿಗೆ ಸಿದ್ದರಾಮಯ್ಯ ಅಷ್ಟೇ ಯಾಕೆ ಕಾಣ್ತಾರೆ ಎಂದ ಮಧುಬಂಗರಾಪ್ಪ ಪ್ರಶ್ನಿಸಿದರು.

ನಮ್ಮ ತಂದೆಯವರು ಮುಖ್ಯಮಂತ್ರಿ ಇದ್ದಾಗ ಬೇಕಾದಷ್ಟು ಕೇಸ್ ಗಳನ್ನ ನೋಡಿದ್ದೇವೆ, ಇದರ ಬಗ್ಗೆ ಚರ್ಚೆ ಮಾಡೋ ಅವಶ್ಯಕತೆ ಇಲ್ಲ.ಸಿಎಂ ರೇಸ್ ನಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚಿನವರು ಎಂಬ ಬಿಜೆಪಿ ನಾಯಕರ ಆರೋಪ.

ನಾನು ಅಷ್ಟು ದೊಡ್ಡ ಮನುಷ್ಯ ಅಲ್ಲ, ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.

ಬಿಜೆಪಿಗೆ ಸಿದ್ದರಾಮಯ್ಯ ಭಯ ಇದ್ಯ ಎಂಬ ಪ್ರಶ್ನೆಗೆ.

ಬಿಜೆಪಿ ಅಷ್ಟೇ ಅಲ್ಲಾ ಜೆಡಿಎಸ್ ಸೇರಿ ಎಲ್ಲ ವಿರೋಧ ಪಕ್ಷದವರಿಗೂ ಭಯ ಇದೆ ಎಂದ ಮಧುಬಂಗಾರಪ್ಪ.

ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಒಳ್ಳೆಯವರನ್ನ ಕೆಳಗಿಳಿಸಲು ಕುತಂತ್ರ ಇರುತ್ತೆ, ಬಿಜೆಪಿಯವರು ನಿಸ್ಸಿಮರು.ಇವತ್ತಿನವರೆಗೂ ಅವರ ಹಣೆಬರಹಕ್ಕೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ.ಬಾಂಬೆ ಬಾಯ್ಸ ಅಂತಾ ನೀವೆ ಎಲ್ಲ ಹಾಕಿದ್ರಿ‌ ಇಂತಹ ಸಂಪ್ರದಾಯ ಬೇಕಾ ನಮಗೆ ಎಂದು ಮಧುಬಂಗಾರಪ್ಪ ಪ್ರಶ್ನಿಸಿದರು.

ದೀಪಾವಳಿ ನಂತರ ಸರ್ಕಾರ ಪತನ ಆಗುತ್ತೆ ಎಂಬ ಬಿಜೆಪಿ ನಾಯಕರು ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಬಿಜೆಪಿಯವರು ಇನ್ನೂ ನಾಲ್ಕು ದೀಪಾವಳಿ ಕಾಯಬೇಕು. ಅಲ್ಲಿಯವರೆಗೆ ಮನೆಯಲ್ಲಿ ದೀಪಾವಳಿ ಮಾಡೋಕೆ ಹೇಳಿ ಎಂದ ಮಧುಬಂಗಾರಪ್ಪ ವ್ಯಂಗ್ಯವಾಡಿದರು.

Read More Articles