ಭಾವೈಕ್ಯತೆಯ ಸಂಗಮಕ್ಕೆ ಸಾಕ್ಷಿಯಾದ ಬೆಳಗಾವಿ !
- shivaraj bandigi
- 3 Jun 2024 , 1:54 PM
- Belagavi
- 1193
ಬೆಳಗಾವಿ : ಹೆರಿಗೆಯ ನಂತರ ಪ್ರಜ್ಞೆ ತಪ್ಪಿದ್ದ ಹಿಂದೂ ಬಾಣಂತಿ, ಶಿಶುವನ್ನು ಮುಸ್ಲಿಂ ಕುಟುಂಬವೊಂದು ಆರೈಕೆ ಮಾಡಿ ಭಾವೈಕತೆಯ ಸಂಗಮಕ್ಕೆ ಸಾಕ್ಷಿಯಾದ ಘಟನೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಎಪ್ರಿಲ್ 20 ರಂದು ಗೋಕಾಕ ತಾಲೂಕಿನ ದಂಡಾಪೂರ ಗ್ರಾಮದ ಏಪ್ರಿಲ್ 20ರಂದು ಶಾಂತವ್ವ ನಿಡಸೋಸಿ ಎಂಬುವವರಿಗೆ ಹೆರಿಗೆಯಾಗಿದೆ.
ಸೀಜರ್ ಮೂಲಕ ಹೆರಿಗೆಯಾಗಿದ್ದರಿಂದ ತೀವ್ರ ರಕ್ತಸ್ರಾವದಿಂದ ಶಾಂತವ್ವ ನಿಡಸೋಸಿ ಪ್ರಜ್ಞೆತಪ್ಪಿದ್ದಾಳೆ. ಆಗ ಪಕ್ಕದ ಬೆಡ್ ನಲ್ಲಿ ಚಿಕಿತ್ಸೆಗೆಂದು ಬಂದಿದ್ದ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಶಮಾ ದೇಸಾಯಿ ಕುಟುಂಬದವರು
ಹೆರಿಗೆಯಾದ ಬಾಣಂತಿಗೆ ಯಾರು ಸಂಬಂಧಿಕರು ಇರದ ಮಾಹಿತಿ ಪಡೆದು ತಾಯಿ-ಶಿಶುವಿನ ಆರೈಕೆ ಮಾಡಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಆರು ದಿನಗಳ ಬಾಣಂತಿ ಮಹಿಳೆ-ಮಗುವಿನ ಆರೈಕೆ ಮಾಡಿದ ಬಳಿಕ ಮಗುವನ್ನು ತಮ್ಮ ಮನೆಗೆ ಕರೆದೊಯ್ದು 40 ದಿನಗಳ ಕಾಲ ಆರೈಕೆ ಮಾಡಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿ ಪೂರ್ಣ ಪ್ರಮಾಣದಲ್ಲಿ ಗುಣಮುಖವಾದ ನಂತರ ಬೆಳಗಾವಿ ಮಾರ್ಕೆಟ್ ಪೊಲೀಸರ ಸಮ್ಮುಖದಲ್ಲಿ ಮಗುವಿನ ಹಸ್ತಾಂತರ ಮಾಡಿದ್ದಾರೆ.
ಜಾತಿ-ಧರ್ಮಗಳ ಹಗ್ಗ ಜಗ್ಗಾಟದ ಮದ್ಯೆ ಭಾವೈಕ್ಯ ಮೆರೆದು ಒಂದು ಮಗು, ತಾಯಿಯ ಆರೈಕೆ ಮಾಡಿದ ಮುಸ್ಲಿಂ ಕುಟುಂಬದ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.