ಸಿಆರ್‌ಪಿಎಫ್ ಶಾಲೆಯ ಬಳಿಯಲ್ಲಿ ಸ್ಫೋಟ:ಚುರುಕುಗೊಂಡ ತನಿಖೆ
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ಶಾಲೆಯ ಹೊರಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಇಂದು ಬೆಳಿಗ್ಗೆ ಈ ಸ್ಫೋಟ ಸಂಭವಿಸಿದ್ದು, ಶಾಲೆಯ ಗೋಡೆಯು ಮತ್ತು ಸುತ್ತಮುತ್ತಲಿನ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ.
ಘಟನೆಯ ಸ್ಥಳವನ್ನು ತಕ್ಷಣವೇ ದೆಹಲಿ ಪೊಲೀಸ್ ಇಲಾಖೆ ಮುಚ್ಚಿ ಭದ್ರಪಡಿಸಿದ್ದು, ಬಾಂಬ್ ನಿಷ್ಕ್ರಿಯ ದಳ, ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ತಂಡ ಮತ್ತು ತನಿಖಾ ತಂಡವು ಸ್ಥಳಕ್ಕೆ ಧಾವಿಸಿದೆ. ಸ್ಫೋಟದ ಪರಿಣಾಮದ ಪ್ರಾಥಮಿಕ ಪರಿಶೀಲನೆಗಳಲ್ಲಿ, ಹತ್ತಿರದ ಅಂಗಡಿ ಹಾಗೂ ಆಂಗಣದಲ್ಲಿದ್ದ ಕಾರು ಹಾನಿಯಾಗಿದೆ.
ಸ್ಫೋಟದ ನಂತರ ಸ್ಥಳದಲ್ಲಿ ದುರ್ವಾಸನೆ ಕಾಣಿಸಿಕೊಂಡಿದ್ದು, ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ, ಈ ಪ್ರದೇಶವನ್ನು ಪೊಲಿಸರು ಸಂಪೂರ್ಣವಾಗಿ ಮುಚ್ಚಿದ್ದು, ಸ್ಫೋಟದ ಹಿಂದಿರುವ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಯುತ್ತಿದೆ.