
ಸಿ.ಟಿ. ರವಿ ಪ್ರಕರಣ: ಡಿಕೆ ಶಿವಕುಮಾರ್ ಹೇಳಿಕೆ, ಬಿಜೆಪಿ ವಿರುದ್ಧ ತೀವ್ರ ಪ್ರತಿಕ್ರಿಯೆ
ಬೆಂಗಳೂರು:ಸಿ.ಟಿ. ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಚಾಲನೆ ನೀಡಿರುವ ಘಟನೆ ನಡೆದಿದೆ. ಬಿಜೆಪಿ, ಡಿಕೆ ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳಕರರನ್ನು ಗುರಿಯಾಗಿಸಿ, ಅವರು ಈ ಪ್ರಕರಣಕ್ಕೆ ಹೈಪ್ ತಂದಿದ್ದಾರೆ ಎಂದು ಆರೋಪಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್,ನಾನು ಯಾವುದೇ ರೀತಿಯ ಸಂಬಂಧ ಹೊಂದಿಲ್ಲ. ಯಾವ ಸೆಕ್ಷನ್‌ಗೂ ನಾನು ಜವಾಬ್ದಾರನಲ್ಲ. ಕಾನೂನು ಮತ್ತು ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಆರೋಪಗಳ ಬಗ್ಗೆ ಮಾತನಾಡುತ್ತ,ಬಿಜೆಪಿ ಕರ್ನಾಟಕದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೆ ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ನನ್ನನ್ನು ನಿರಂತರವಾಗಿ ಆರೋಪಿಸುವುದು ಅವರ ರಾಜಕೀಯ ಆಟ
ಎಂದು ಡಿಕೆ ಶಿವಕುಮಾರ್ ಹೇಳಿದರು.
ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ತಮ್ಮ ಆರೋಪಗಳನ್ನು ಮುಂದುವರಿಸಲು ತಯಾರಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಯನ್ನು ನೋಡಲು ಎಲ್ಲರ ಕಣ್ಣುಗಳು ಕಾನೂನು ಪ್ರಕ್ರಿಯೆ ಮತ್ತು ರಾಜಕೀಯ ಬೆಳವಣಿಗೆಗಳತ್ತ ನೆಟ್ಟಿವೆ.