ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ವಲಯ ಅರಣ್ಯಾಧಿಕಾರಿ ವೃಂದದ ನೇರ ನೇಮಕಾತಿಗೆ ಕರೆ
- 15 Jan 2024 , 2:44 AM
- Bengaluru
- 179
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 20.10.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19.11.2022 ಸಂಜೆ 5.30 ಗಂಟೆಯ ವರೆಗೆ.
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ :23.11.2022
ಒಟ್ಟು ಹುದ್ದೆಗಳು : 10
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತ, ಪವರ್ಗ ||ಎ, ||ಬಿ, |||ಎ ಮತ್ತು |||ಬಿ
200 + 20.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ :100 + 20
ವೇತನ ಶ್ರೇಣಿ:
ರೂ.40900-1100-46400-1250-53900-1450-62600-1650-72500-1900-78200.
ಹುದ್ದೆಗಳ ವರ್ಗೀಕರಣ:
ಬಿ.ಎಸ್ಸಿ. (ಅರಣ್ಯಶಾಸ್ತ್ರ) ಪದವೀಧರರಿಗೆ : 5 ಹುದ್ದೆಗಳು.
ಬಿ.ಎಸ್ಸಿ (ವಿಜ್ಞಾನ) /ನಿಗದಿತ ಇಂಜಿನಿಯರಿಂಗ್ ಪದವೀಧರರಿಗೆ :5 ಹುದ್ದೆಗಳು
ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯು ನಿಗಧಿತ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ನಿಗದಿಪಡಿಸಿದ ಗರಿಷ್ಠ ಅಂಕಗಳಿಗೆ ಕನಿಷ್ಠ ಶೇಕಡ 50 ಅಂಕಗಳನ್ನು ಪಡೆದು (ಎಲ್ಲಾ ವಾರ್ಷಿಕ / ಸೆಮಿಸ್ಟರ್ ಪರೀಕ್ಷೆಗಳು ಒಳಗೊಂಡಂತೆ) ತೇರ್ಗಡೆಯಾಗಿರಬೇಕು.
ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಅರಣ್ಯ ಶಾಸ್ತ್ರ ವಿಷಯದಲ್ಲಿ ಪದವೀಧರರಾಗಿರಬೇಕು.
ಅಥವಾ
ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಒಳಗೊಂಡಂತೆ ಬಿ.ಎಸ್ಸಿ. ಪದವೀಧರರಾಗಿರಬೇಕು.
ಕೃಷಿ, ಅರಣ್ಯ ಶಾಸ್ತ್ರ, ತೋಟಗಾರಿಕೆ , ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಜ್ಞಾನ, ಮೀನುಗಾರಿಕೆ, ವನ್ಯಜೀವಿ, ಪರಿಸರ ವಿಜ್ಞಾನ, ರಸಾಯನಶಾಸ್ತ್ರ, ಭೂ ವಿಜ್ಞಾನ, ಗಣಿತಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ ಅಫ್ರಿಕೇಷನ್,
ಅಥವಾ ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಈ ಕೆಳಕಂಡ Engineering/Technology ಪದವೀಧರರಾಗಿರಬೇಕು.
(1) ಕೃಷಿ, (ii) ಕಮಿಕಲ್, (iii) ಸಿವಿಲ್, (iv) ಎಲೆಕ್ನಿಕಲ್, (V)ಎಲೆಕ್ಟ್ರಾನಿಕ್ಸ್ , (vi) ಮೆಕಾನಿಕಲ್ , (vii) ಕಂಪ್ಯೂಟರ್ ಸೈನ್ಸ್ .
ವಯೋಮಿತಿ: ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ರಲ್ಲಿ ಒಳಗೊಂಡಿರುವ ಯಾವುದೇ ವಿಷಯದ ಹೊರತಾಗಿಯೂ ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು
ಸಾಮಾನ್ಯ ಅಭ್ಯರ್ಥಿ ಗರಿಷ್ಟ 28 ವರ್ಷಗಳು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-I :
ಗರಿಷ್ಟ 33 ವರ್ಷಗಳು.
ಪ್ರವರ್ಗ IIಎ, IIಬಿ, IIIಎ, IIIಬಿ ಹಿಂದುಳಿದ ಪ್ರವರ್ಗ:
ಗರಿಷ್ಟ 31 ವರ್ಷಗಳು.
ಅರ್ಜಿ ಮತ್ತು ಈ ಪ್ರಕ್ರಿಯೆಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಕರ್ನಾಟಕ ಅರಣ್ಯ ಇಲಾಖಾ ವೆಬ್‌ಸೈಟ್ aranya.gov.in ಆನ್‌ಲೈನ್ ವ್ಯವಸ್ಥೆಯ ಮೂಲಕ ಮಾತ್ರ ಸಲ್ಲಿಸತಕ್ಕದ್ದು. ಸದರಿ ವ್ಯವಸ್ಥೆಯನ್ನು ಹೊರತುಪಡಿಸಿ ಇತರೆ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.