ಪವಿತ್ರಾ ಸಾವಿನ ಬೆನ್ನಲ್ಲೇ ಚಂದು ಆತ್ಮಹತ್ಯೆ
- shivaraj bandigi
- 18 May 2024 , 1:19 PM
- Bengaluru
- 334
ಬೆಂಗಳೂರು: ನಾಲ್ಕು ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಅದೇ ಕಾರಿನಲ್ಲಿದ್ದ ಚಂದ್ರಕಾಂತ್ ಅಲಿಯಾಸ್ ಚಂದು ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಕಣ್ಣೆದುರೇ ಪವಿತ್ರಾ ಜಯರಾಮ್ ಸಾವನ್ನಪ್ಪಿದ್ದನ್ನು ನೋಡಿ ನಟ ಚಂದು ಆಘಾತಕ್ಕೊಳಗಾಗಿದ್ದರು. ಅದೇ ನೋವಿನಲ್ಲಿ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ.