ಬಿಜೆಪಿ ಮುಖಂಡನಿಂದ ದಂಪತಿಗಳ ಮೇಲೆ ಹಲ್ಲೆ
- shivaraj bandigi
- 8 May 2024 , 12:56 PM
- Belagavi
- 777
ಚಿಕ್ಕೋಡಿ- ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಮುಸ್ಲಿಂ ದಂಪತಿಗಳ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮತದಾನ ಮಾಡುವ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ದಂಪತಿಗಳನ್ನು ಥಳಿಸಲಾಗಿದೆ ಎನ್ನಲಾಗಿದ್ದು,
ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ಘಟನೆ ನಡೆದಿದೆ.
ಬಿಜೆಪಿ ಮುಖಂಡ ಬಾಬಾಸಾಹೇಬ್ ದೊಂಡಿರಾಮ್ ಶಿಂಧೆ ಮುಸ್ಲಿಂ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು ಮತಗಟ್ಟೆಯಿಂದ ಎಳೆದು ತಂದು ತನ್ನ ಸ್ವಂತ್ ಹಾಲಿನ ಡೈರಿಯಲ್ಲಿ ಹಲ್ಲೆ ನಡೆಸಲಾಗಿದೆ.
ಮಹಮ್ಮದ ದಾವಲ್ ವಜ್ರವಾಡೆ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ, ಈತನನ್ನು ಹೊಡೆಯುವ ಸಂದರ್ಭದಲ್ಲಿ ಮದ್ಯೆ ಬಂದ ಆತನ ಪತ್ನಿ ರಮೀಜಾ ಮಹಮ್ಮದ ವಜ್ರವಾಡೆ ಇವರ ಮೇಲೆಯೂ ಕೂಡಾ ಬಿಜಿಪಿ ಮುಖಂಡ ದಾದಾಸಾಹೇಬ್ ಶಿಂಧೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಚಳಗಾದ ಮಹಮ್ಮದ ವಜ್ರವಾಡೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿದ್ದಾರೆ.
ಈ ಕುರಿತು ಬಾಬಾಸಾಬ ದೊಂಡಿರಾಮ್ ಶಿಂಧೆ ಹಾಗೂ ಇತರ ಎಂಟು ಜನರ ವಿರುದ್ಧ ಹಲ್ಲೆ ಆರೋಪದಡಿ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ವರದಿ : ರಾಹುಲ್ ಮಾದರ