ದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಉತ್ಸವ 2024

ಬೈಲಹೊಂಗಲ : ಇಲ್ಲಿನ ಮುರಗೋಡ ರಸ್ತೆಯಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ಯವಾಗಿ ದಸರಾ ಉತ್ಸವ ಕಾರ್ಯಕ್ರಮವು ವೇ.ಮೂ.ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರ ನೇತೃತ್ವದಲ್ಲಿ ದಿ. 4 ರಿಂದ 12 ರವೆಗೆ ಒಂಬತ್ತು ದಿನಗಳ ಕಾಲ ನಡೆಯಲಿದೆ. 

promotions

ಒಂಬತ್ತು ದಿನಗಳು ಶ್ರೀ ದುರ್ಗಾದೇವಿಗೆ ನವ ಅಲಂಕಾರಗಳ ಮಹಾಪೂಜೆ, ಮಹಾಚಂಡಿಕಾಯಾಗ, ಸಹಸ್ರ ಲಲಿತ ಪಠನ, ಮಹಿಳೆಯರಿಗಾಗಿ ದಾಂಡಿಯಾ ನೃತ್ಯ ಹಾಗೂ ಬೃಹತ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ದೇವಿಗೆ ಮಹಾಮಂಗಳಾರತಿ ನಂತರ ಮಹಾಪ್ರಸಾದ ಜರುಗುವದು. 

promotions

ದಸರಾ ದಿನದಂದು ಸಾಧಕರಿಗೆ ಸತ್ಕಾರ ಜೊತೆಗೆ ಕಿರುತೆರೆ ಕಲಾವಿದರು, ಯ್ಯೂಟೂಬ್ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ವೇ. ಮೂ.ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ತಿಳಿಸಿದ್ದಾರೆ.

ವರದಿ : ರವಿಕಿರಣ್  ಯಾತಗೇರಿ

Read More Articles