
ವಿದ್ಯುತ್ ಅವಘಡ ಟೈಯರ್ ಅಂಗಡಿಗೆ ಬೆಂಕಿ ಸುಮಾರು ಒಂದು ಕೋಟಿರುಗು ಅಧಿಕ ಹಾನಿ
- shivaraj bandigi
- 31 May 2024 , 9:48 AM
- Belagavi
- 2441
ಕಾಗವಾಡ : ತಾಲೂಕಿನ ಶಿರುಗುಪ್ಪಿ ಗ್ರಾಮದ ಶಿವಶಕ್ತಿ ವಿಲ್ಲರ್ಸ್ ಮೆಕಾನಿಕಲ್ ಅಂಗಡಿಗೆ ಶಾರ್ಟ್ ಸರ್ಕಿಟ್ ಮುಖಾಂತರ ಬೆಂಕಿ ತಗಲಿ 1 ಗಂಟೆಯಲ್ಲಿ ಹತ್ತಿರ ಸುಮಾರು ಅಂಗಡಿಗಳು ಅಗ್ನಿ ಆಹುತಿವಾಗಿವೆ

ಜೀವನ ಆಗ್ರೋ ಟೆಕ್ ರೈತರ ಗೊಬ್ಬರ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧದ ಅಂಗಡಿಗೆ ಉಷ್ಣತೆಯ ಬಿಸಿತಟ್ಟಿ ಅಲ್ಲಿಗೆ ಇರುವ ರಸಗೊಬ್ಬರ ಮತ್ತು ಬೆಳೆಗಳಿಗೆ ಸಿಂಪರಿಸುವ ಔಷದ ಹೀಗೆ ಸುಮಾರು 40 ಲಕ್ಷ ರೂಪಾಯಿದಷ್ಟು ಹಾನಿಯಾಗಿದೆ.ಒಟ್ಟು 85 ಲಕ್ಷ ರೂಪಾಯಿದಷ್ಟು ಹಾನಿಯಾಗಿದ್ದು ಎರಡು ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಶಿರುಗುಪ್ಪಿ ಗ್ರಾಮದಲ್ಲಿ ಬೆಳ್ಳಿಗೆ ಶಿವಶಕ್ತಿ ವಿಲರ್ಸ್ ಗ್ಯಾರೇಜ್ ಅಂಗಡಿಗೆ ಬೆಂಕಿ ತಗಲಿ ಅದರಲ್ಲಿ ಇರುವ ಎರಡು ಮಾರುತಿ ಕಾರುಗಳು , ಫಿಟಿಂಗ್ ಮಷೀನ್ ಡಿಸ್ಕ ಮಷೀನ್, ಏರ್ ಕಂಪ್ರೆಸರ್ ಫಿಲ್ಟರ್ ಮಷೀನ್, 250 ಲಿಟರ್ ಇಂಜಿನ್ ಆಯಿಲ್, ಕಂಪ್ಯೂಟರ್ ಏಸಿ ಸಿಸಿಟಿವಿ ಸೇರಿದಂತೆ ಇನ್ನು ಬೆಲೆ ಬಾಳುವ ಯಂತ್ರಗಳು ಅಗ್ನಿಗೆ ಆಹುತಿಯಾಗಿವೆ.
ಅಗ್ನಿ ನಂದಿಸಲು ಸ್ಥಳೀಯರು ಹರಸಾಹಸ ಮಾಡಿದರು, ರಾಯಬಾಗ್, ಉಗಾರ್, ಚಿಕ್ಕೋಡಿ ನಿಪ್ಪಾಣಿ ದಿಂದ ಅಗ್ನಿಶಾಮಕ ದಳದ ತಂಡಗಳು ಆಗಮಿಸಿ ಅಗ್ನಿ ನದಿಸಿದರು. ಇದರಲ್ಲಿ ರಾಯಬಾಗದ ಚಿಕ್ಕೋಡಿ ಅಧಿಕಾರಿಗಳಾದ ಬಿ. ಎಲ್ ಅನುರಾಗ,ಕಿರಣ ಯಾದವ್, ಅನಿಲ್ ಜಮಾದಡೆ,ಇವರು ವಿಶೇಷ ಪ್ರಯತ್ನಿಸಿದರು.
ವರದಿ : ರಾಹುಲ್ ಮಾದರ