ಬೆಳಗಾವಿಯಲ್ಲಿ ಖೋಟಾ ನೋಟು ಗ್ಯಾಂಗ್ ಪತ್ತೆ: 6 ಮಂದಿ ಅರೆಸ್ಟ್

ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಗ್ಯಾಂಗ್‌ನ 6 ಮಂದಿಯನ್ನು ಬೆಳಗಾವಿ ಎಸ್.ಪಿ  ಭೀಮಾಶಂಕರ ಗುಳೇದ ನೇತೃತ್ವದಲ್ಲಿ ಬಂಧಿಸಲಾಗಿದೆ. 

ದಿನಾಂಕ 29 ಜೂನ್ 2024 ರಂದು  04:30ಕ್ಕೆ, ಗೋಕಾಕ ಬಳಿಯ ಕಡ್ಡಬಗಟ್ಟಿ ರಸ್ತೆಯ ಬಳಿ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ತಪಾಸಣೆ ಮಾಡುವಾಗ, 305 ಖೋಟಾ ನೋಟುಗಳು (₹30,500) ಹಾಗೂ 6,792 ಆಟಿಕೆಯ ನೋಟುಗಳನ್ನು ಜಪ್ತ ಮಾಡಲಾಗಿದೆ. 

ಆರೋಪಿತರಿಂದ ಹೆಚ್ಚಿನ ವಿಚಾರಣೆ ನಡೆಸಿದಾಗ, ಅವರು ಗೋಕಾಕ, ಮಹಾಲಿಂಗಪೂರ, ಮುಧೋಳ, ಯರಗಟ್ಟಿ, ಹಿಡಕಲ್ ಡ್ಯಾಂ, ಬೆಳಗಾವಿ, ಧಾರವಾಡ ಮುಂತಾದ ಸ್ಥಳಗಳಲ್ಲಿ 1 ಲಕ್ಷ ಅಸಲು ನೋಟುಗಳಿಗೆ 4 ಲಕ್ಷ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. 

ತನಿಖೆ ಮುಂದುವರಿಸಿ, ಆರೋಪಿ ಅನ್ವರ ಯಾದವಾಡ ಅವರ ಮನೆ ಯಿಂದ ಖೋಟಾ ನೋಟು ಪ್ರಿಂಟ್ ಮಾಡಲು ಬಳಸಿದ ಯಂತ್ರಗಳು, ಕಂಪ್ಯೂಟರ್, ಮೊಬೈಲುಗಳು, ಮತ್ತು ಬಿಳಿ ಬಣ್ಣದ ಸ್ವಿಫ್ಟ್  ಕಾರ್ ವಶಪಡಿಸಿಕೊಳ್ಳಲಾಗಿದೆ. 

ಬಂಧಿತರು: 1. ಅನ್ವರ ಯಾದವಾಡ (26)
2. ಸದ್ಭಾಂ ಯಡಹಳ್ಳಿ (27)
3. ರವಿ ಹ್ಯಾಗಾಡಿ (27)
4. ದುಂಡಪ್ಪ ಒಣಶೆನವಿ (27)
5. ವಿಠಲ ಹೊಸಕೋಟಿ (29)
6.ಮಲ್ಲಪ್ಪ ಅಲ್ಲಪಾ ಕುಂಬಾಳಿ .
ಈ ಕಾರ್ಯಾಚರಣೆಯಲ್ಲಿ ಮಾನ್ಯ ಎಸ್.ಪಿ. ಬೆಳಗಾವಿ, ಹೆಚ್ಚುವರಿ ಎಸ್.ಪಿ., ಡಿ.ಎಸ್.ಪಿ ಗೋಕಾಕ, ಸಿ.ಪಿ.ಐ ಗೋಪಾಲ ರಾಠೋಡ, ಮತ್ತು ಇತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದು, ಅವರ ಕಾರ್ಯವನ್ನು ಶ್ಲಾಘಿಸಲಾಗಿದೆ.

promotions

Read More Articles